ಮೈಸೂರಿನ ಬಿ.ಎಂ. ಹ್ಯಾಬಿಟ್ಯಾಟ್ ಮಾಲ್ಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಾಲ್ನಲ್ಲಿದ್ದ ಹಲವು ಎಸ್ಕಲೇಟರ್ಗಳು ಏಕಕಾಲಕ್ಕೆ ಕುಸಿಯುವುದು ವಿಡಿಯೊದಲ್ಲಿದೆ. ಅವಘಡದಲ್ಲಿ ಅನೇಕರು ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊದ ಕೀಫ್ರೇಮ್ಗಳನ್ನು ಇನ್ವಿಡ್ ಟೂಲ್ ಮೂಲಕ ಪ್ರತ್ಯೇಕಿಸಿ, ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ ಇದೇ ವಿಡಿಯೊ ಅನ್ನು ಹಲವರು ಇಂತಹ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡಿತು; ಜತೆಗೆ, ‘ಡಿಸಾಸ್ಟರ್ ಸ್ಟ್ರಕ್ಸ್’ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ಜೂನ್ 10ರಂದು ಅಪ್ಲೋಡ್ ಮಾಡಲಾಗಿರುವ ವಿಡಿಯೊಗೆ ಸಂಪರ್ಕ ನೀಡಿತು. ಎರಡೂ ವಿಡಿಯೊಗಳು ಒಂದೇ ಆಗಿರುವುದು ದೃಢಪಟ್ಟಿತು. ವಿಡಿಯೊದ ಅಡಿಬರಹದಲ್ಲಿ ಯೂಟ್ಯೂಬ್ ಕ್ರಿಯೇಟರ್, ‘ಈ ವಿಡಿಯೊ ಅನ್ನು ನಾನು ಎಐ ತಾಂತ್ರಿಕತೆಯ ನೆರವಿನಿಂದ ರೂಪಿಸಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

ಎಐ ಪತ್ತೆ ಸಾಧನವಾದ ‘ಹೈವ್ ಮಾಡರೇಷನ್’ ಮೂಲಕ ಪರಿಶೀಲಿಸಿದಾಗಲೂ ಇದು ಎಐ ನಿರ್ಮಿತ ವಿಡಿಯೊ ಎನ್ನುವುದು ಖಚಿತವಾಯಿತು. ಜತೆಗೆ, ನಿರ್ದಿಷ್ಟ ಪದದ ಮೂಲಕ ಗೂಗಲ್ನಲ್ಲಿ ಹುಡುಕಾಟ ನಡೆಸಿದಾಗ ಮೈಸೂರಿನಲ್ಲಿ ಇಂಥ ಘಟನೆ ನಡೆದಿರುವ ಬಗ್ಗೆ ಯಾವ ಮಾಧ್ಯಮದಲ್ಲಿಯೂ ವರದಿಯಾಗಿಲ್ಲ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.