ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ 'ತೇಜಸ್‌'ನಲ್ಲಿ ಹಾರಾಟ: ವಿಮಾನದ ಬಗ್ಗೆ ತಿಳಿಯಲೇಬೇಕಾದ 5 ಅಂಶಗಳು..

Published 25 ನವೆಂಬರ್ 2023, 11:22 IST
Last Updated 25 ನವೆಂಬರ್ 2023, 11:22 IST
ಅಕ್ಷರ ಗಾತ್ರ
Introduction

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಬೆಂಗಳೂರಿಗೆ ಆಗಮಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಘಟಕಕ್ಕೆ ಭೇಟಿ ನೀಡಿದರು. ನಂತರ ಎಚ್‌ಎಎಲ್‌ ದೇಶಿಯವಾಗಿ ನಿರ್ಮಾಣ ಮಾಡಿರುವ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. 

1

ತೇಜಸ್‌ ತರಬೇತಿ ಯುದ್ಧ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾರಾಟ ನಡೆಸಿದರು...

ತೇಜಸ್ ಲಘು ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿ

ತೇಜಸ್ ಲಘು ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿ

ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಹಾರಾಟ ನಡೆಸಿದ ತೇಜಸ್‌ ತರಬೇತಿ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಯಿತು. ಡ್ಯುಯಲ್ ಸೀಟ್ ಹೊಂದಿರುವ ಈ ತರಬೇತಿ ಲಘು ಯುದ್ಧ ವಿಮಾನ ಬಹು ವಿಧದ ಕಾರ್ಯಕ್ಷಮತೆಯನ್ನು ಹೊಂದಿದೆ. ಇದನ್ನು ಭಾರತೀಯ ವಾಯುಪಡೆಯ ಪೈಲಟ್‌ ಹಾರಿಸಿದರು. 

2

ಸುರಕ್ಷತೆಯೊಂದಿಗೆ ತೇಜಸ್‌ ವಿಮಾನ ಒಂದೇ ಎಂಜಿನ್‌ ಹೊಂದಿದೆ...

ತೇಜಸ್ ಲಘು ಯುದ್ಧ ವಿಮಾನದ ಬಳಿ ಪ್ರಧಾನಿ ಮೋದಿ

ತೇಜಸ್ ಲಘು ಯುದ್ಧ ವಿಮಾನದ ಬಳಿ ಪ್ರಧಾನಿ ಮೋದಿ

ಸುರಕ್ಷತಾ ದೃಷ್ಟಿಯಿಂದ ಪ್ರಧಾನಮಂತ್ರಿಗಳು ಸಾಮಾನ್ಯವಾಗಿ ಎರಡು ಎಂಜಿನ್‌ಗಳಿರುವ ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ಆದರೆ, ಸುರಕ್ಷತೆ ಇರುವ ತೇಜಸ್‌ ಒಂದು ಎಂಜಿನ್‌ ಇರುವ ವಿಮಾನವಾಗಿದೆ. ಈ ವಿಮಾನದ ಮೇಲೆ ಸರ್ಕಾರ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿದೆ. 

3

2029ರ ವೇಳೆಗೆ 83 ತೇಜಸ್‌ ವಿಮಾನಗಳು ಭಾರತೀಯ ವಾಯುಪಡೆ ಸೇರಲಿವೆ...

ತೇಜಸ್ ಲಘು ಯುದ್ಧ ವಿಮಾನ

ತೇಜಸ್ ಲಘು ಯುದ್ಧ ವಿಮಾನ

ಮುಂದಿನ ವರ್ಷಗಳಲ್ಲಿ ಬಾರತೀಯ ವಾಯುಪಡೆಗೆ ತೇಜಸ್ ಯುದ್ಧ ವಿಮಾನಗಳು ಪ್ರಮುಖ ಶಕ್ತಿಯಾಗಿವೆ. ಈಗಾಗಲೇ ಹಲವು ತೇಜಸ್‌ ವಿಮಾನಗಳ ಕಾರ್ಯನಿರ್ವಹಿಸುತ್ತಿವೆ. 2029ರ ವೇಳೆಗೆ 83 ತೇಜಸ್‌ (ಎಂಕೆ1ಎ) ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಬರಲಿವೆ

4

ತೇಜಸ್‌ ವಿಮಾನಗಳನ್ನು ಹೊಸ ತಂತ್ರಜ್ಞಾನದಲ್ಲಿ ನವೀಕರಿಸಲಾಗಿದೆ

ತೇಜಸ್ ಲಘು ಯುದ್ಧ ವಿಮಾನ

ತೇಜಸ್ ಲಘು ಯುದ್ಧ ವಿಮಾನ

ಭಾರತ ಸರ್ಕಾರ ರಕ್ಷಣಾ ಕ್ಷೇತ್ರದಲ್ಲೂ ಆತ್ಮನಿರ್ಭರತೆಯನ್ನು ತೋರಿದೆ. ತೇಜಸ್‌ ಯುದ್ಧ ವಿಮಾನ ನಮ್ಮ ಸ್ವಾಲಂಬನೆ್ಎ ಸಾಕ್ಷಿಯಾಗಿದೆ. ತೇಜಸ್‌ ವಿಮಾನಗಳನ್ನು ಹೊಸ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ನವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ತೇಜಸ್‌ ಎಂಕೆ 2 ಯುದ್ಧ ವಿಮಾನಗಳನ್ನು ನಿರ್ಮಾಣ ಮಾಡಲಾಗುವುದು. 

5

ಜೆಟ್ ಎಂಜಿನ್‌ಗಳನ್ನು ಭಾರತದಲ್ಲಿ ತಯಾರಿಸಲು ಎಚ್ಎಎಲ್ ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ

ತೇಜಸ್ ಲಘು ಯುದ್ಧ ವಿಮಾನ

ತೇಜಸ್ ಲಘು ಯುದ್ಧ ವಿಮಾನ

ಭಾರತದಲ್ಲಿ ಜೆಟ್ ಎಂಜಿನ್‌ಗಳನ್ನು ತಯಾರಿಸಲು ಎಚ್ಎಎಲ್ ಇತ್ತೀಚೆಗೆ ಜನರಲ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದನ್ನು ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ಘೋಷಣೆ ಮಾಡಲಾಯಿತು. ಜನರಲ್ ಎಲೆಕ್ಟ್ರಿಕ್ ಭಾರತದಲ್ಲಿ ಎಫ್ 414 ಎಂಜಿನ್ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಿದೆ. ಈ ಘಟಕದಲ್ಲಿ ತೇಜಸ್‌ ವಿಮಾನದ ಎಂಜಿನ್‌ಗಳು ತಯಾರಾಗಲಿವೆ ಎನ್ನಲಾಗಿದೆ.