ಹೈದರಾಬಾದ್: ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಸೊಳ್ಳೆಗಳನ್ನು ನಿಯಂತ್ರಿಸುವ ಹೊಸದೊಂದು ತಂತ್ರಜ್ಞಾನವನ್ನು ಆಂಧ್ರ ಪ್ರದೇಶ ಸರ್ಕಾರ ಪರಿಚಯಿಸಲು ಮುಂದಾಗಿದೆ.

‘ಸ್ಮಾರ್ಟ್ ಮಸ್ಕಿಟೊ ಸರ್ವಲೆನ್ಸ್ ಸಿಸ್ಟಮ್’ (ಎಸ್ಎಂಒಎಸ್ಎಸ್) ಹೆಸರಿನ ಈ ತಂತ್ರಜ್ಞಾನವು ಪ್ರದೇಶವೊಂದರಲ್ಲಿ ಇರುವ ಸೊಳ್ಳೆಗಳ ಸಂಖ್ಯೆಯನ್ನು ಲೆಕ್ಕಹಾಕಿ ಮಾಹಿತಿ ನೀಡುತ್ತದೆ. ಈ ಮೂಲಕ ಡೆಂಗಿ ಹರಡುವಿಕೆಯನ್ನು ನಿಯಂತ್ರಿಸಬಹುದು ಎಂದು ಸರ್ಕಾರ ಹೇಳಿದೆ. ಪರೀಕ್ಷಾರ್ಥವಾಗಿ ರಾಜ್ಯದ ಒಟ್ಟು 66 ಪ್ರದೇಶಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

ಸೊಳ್ಳೆಗಳ ಪ್ರಭೇದ, ಲಿಂಗ, ಸಂಖ್ಯೆ ಮತ್ತು ವಾತಾವರಣವನ್ನು (ತಾಪಮಾನ ಮತ್ತು ತೇವ) ಪತ್ತೆ ಮಾಡಲು ಕೃತಕ ಬುದ್ಧಿಮತ್ತೆ ಚಾಲಿತ ಸೆನ್ಸರ್, ಡ್ರೋನ್ ಸೇರಿದಂತೆ ಇತರೆ ಸ್ಮಾರ್ಟ್ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತದೆ. ಪ್ರದೇಶವೊಂದರಲ್ಲಿ ಅಪಾಯಕಾರಿ ಮಟ್ಟವನ್ನು ಮೀರಿ ಸೊಳ್ಳೆಗಳ ಸಂಖ್ಯೆ ಪತ್ತೆಯಾದರೆ, ಈ ವ್ಯವಸ್ಥೆಯು ತಕ್ಷಣವೇ ಸ್ಥಳೀಯ ಸಂಸ್ಥೆಗಳ ತಂಡಗಳಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತದೆ.

‘ಹೆಚ್ಚು ಸೊಳ್ಳೆ ಇರುವಲ್ಲಿ ಮಾತ್ರವೇ ಡ್ರೋನ್ ಮೂಲಕ ಔಷಧ ಸಿಂಪಡಿಸಲಾಗುವುದು. ಇದರಿಂದ ಖರ್ಚು ಉಳಿಯಲಿದೆ. ಆಸ್ಪತ್ರೆಗಳು ಕಳುಹಿಸುವ ಡೆಂಗಿ, ಮಲೇರಿಯಾ ಮತ್ತು ಚಿಕೂನ್ಗುನ್ಯ ಪ್ರಕರಣಗಳನ್ನು ಆಧರಿಸಿ, ಆಯಾ ಪ್ರದೇಶಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಸರ್ಕಾರ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.