ನವದೆಹಲಿ: ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಬ್ರಿಟನ್ನ (ಯುಕೆ) ಎರಡು ಕುಟುಂಬಗಳಿಗೆ ಬೇರೆಯವರ ಮೃತದೇಹ ನೀಡಲಾಗಿದೆ ಎಂಬ ವಿದೇಶಿ ಮಾಧ್ಯಮಗಳ ವರದಿಯನ್ನು ಭಾರತ ತಳ್ಳಿಹಾಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ‘ಎಲ್ಲಾ ಮೃತದೇಹಗಳನ್ನು ಅತ್ಯಂತ ವೃತ್ತಿಪರತೆಯಿಂದ ಮತ್ತು ಮೃತರ ಘನತೆಗೆ ಧಕ್ಕೆಯಾಗದ ಹಾಗೆ ಗೌರವದಿಂದ ನಿರ್ವಹಿಸಲಾಗಿದೆ. ವರದಿ ಬಿತ್ತರವಾಗುತ್ತಿದ್ದಂತೆ ಬ್ರಿಟನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲದೆ ದುರಂತದ ನಂತರ ಸಂಬಂಧಪಟ್ಟ ಅಧಿಕಾರಿಗಳು ಶಿಷ್ಟಾಚಾರ ಮತ್ತು ತಾಂತ್ರಿಕ ನೆರವಿನ ಮೂಲಕವೇ ಮೃತರ ಗುರುತಗಳನ್ನು ಪತ್ತೆ ಮಾಡಿದ್ದಾರೆ’ ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಜೂನ್ 12 ರಂದು ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ನಲ್ಲಿ ಪತನಗೊಂಡು ವಿಮಾನದಲ್ಲಿದ್ದ 12 ಸಿಬ್ಬಂದಿ ಒಳಗೊಂಡು 241 ಮಂದಿ ಮೃತಪಟ್ಟಿದ್ದರು. ಇದರಲ್ಲಿ 53 ಜನ ವಿದೇಶಿ ಪ್ರಜೆಗಳಿದ್ದರು.

ಮೃತದೇಹದ ಹಸ್ತಾಂತರದ ವೇಳೆ ತಪ್ಪಾದ ಶವವನ್ನು ಕೊಡಲಾಗಿದೆ. ಇದರಿಂದ ಕುಟುಂಬಸ್ಥರು ಇನ್ನಷ್ಟು ನೋವನ್ನು ಅನುಭವಿಸುತ್ತಿದ್ದಾರೆ ಎಂದು ಎಂದು ಡೈಲಿ ಮೇಲ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.