ಅಮರಾವತಿ: ಆಂಧ್ರಪ್ರದೇಶದ ಅನಕಪಲ್ಲಿಯ ಜಿಲ್ಲೆಯ ಚೋದಾವರಂ ಸಬ್ ಜೈಲಿನಿಂದ ಇಬ್ಬರು ವಿಚಾರಣಾಧೀನ ಕೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.

ಪರಾರಿಯಾದ ಕೈದಿಗಳನ್ನು ರಾಮು, ಕುಮಾರ್ ಎಂದು ಗುರುತಿಸಲಾಗಿದೆ.

ಸಂಚು ರೂಪಿಸಿದ್ದ ರಾಮು, ಕುಮಾರ್ ಶುಕ್ರವಾರ ಸಂಜೆ ಪರಾರಿಯಾಗಿದ್ದು ಅವರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆದಿದೆ ಎಂದು ಅನಕಪಲ್ಲಿ ಎಸ್.ಪಿ ತುಹಿನ್ ಸಿನ್ಹಾ ಹೇಳಿದ್ದಾರೆ.

ಜೈಲಿನ ಅಡುಗೆ ಮನೆಯಲ್ಲಿ ಕೆಲಸಕ್ಕೆ ನಿಯೋಜನೆ ಆಗಿದ್ದ ಕುಮಾರ್, ವಾರ್ಡರ್ ತಲೆಗೆ ಸುತ್ತಿಗೆಯಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ. ಆಗ ಅಲ್ಲಿಗೆ ಜೈಲಿನ ಸಿಬ್ಬಂದಿ ಬಂದಾಗ ಅಡುಗೆ ಕೋಣೆಯ ಬೀಗ ಹಾಕಿ ಕುಮಾರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ನಂತರ ರಾಮುನೊಂದಿಗೆ ಜೈಲರ್ ಕೋಣೆಗೆ ತೆರಳಿ ಜೈಲಿನ ಬಾಗಿಲಿನ ಕೀಲಿಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಚೋದಾವರಂ ಸಬ್ ಜೈಲು ಕಿರಿದಾದ ಜೈಲಾಗಿದ್ದು 16 ಕೈದಿಗಳಿದ್ದಾರೆ. ರಾಮು ಹಾಗೂ ಕುಮಾರ್ ಮೇಲೆ ಕೊಲೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.