ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಯೋಧ್ಯೆ ಭೂಮಿ ಪೂಜೆ: ಟ್ವಿಟರ್‌ನಲ್ಲಿ ಟ್ರೆಂಡ್ ಆದ #JaiShriRam, #RamMandir

Published : 5 ಆಗಸ್ಟ್ 2020, 6:52 IST
ಫಾಲೋ ಮಾಡಿ
Comments

ಅಯೋಧ್ಯೆ:ಇಂದು ಮಧ್ಯಾಹ್ನ 12.15ಕ್ಕೆ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದ್ದು, ಈ ವೇಳೆ ರಾಜ್ಯದ ಎಲ್ಲ ದೇಗುಲಗಳಲ್ಲೂ ಕೂಡ ಶ್ರೀರಾಮನ ಜಪ ಮೊಳಗುತ್ತಿದೆ.

ಟ್ವಿಟರ್‌ನಲ್ಲೂ ಕೂಡ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆಗೆ ಸಂಬಂಧಿಸಿದಂತೆ ಟ್ರೆಂಡಿಂಗ್ ಆಗಿದ್ದು, ಮುಂಜಾನೆಯಿಂದಲೂ ಟ್ವೀಟಿಗರು ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ.

#पधारो_राम_अयोध्या_धाम, #JaiShriRam, श्री राम, #BabriZindaHai, #RamMandir, #Ayodhya, Ram Janambhoomi, Ram Temple, #LandOfRavanan, #TrueBlessings, #रामराज्य_उद्घोष, #BabriMasjid, #राममंदिर_से_रामराज्य ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.

ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮ ಜನಿಸಿದ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಅಲ್ಲಿ ಜಿಹಾದಿ ಆಕ್ರಮಣಕಾರರು ಅಕ್ರಮ ರಚನೆಯನ್ನು ನಿರ್ಮಿಸಿದ್ದು ಕೇವಲ ಅವರು ಹಿಂದೂಗಳನ್ನು ನಿಂದಿಸಲು ಮತ್ತು ಅಪಹಾಸ್ಯ ಮಾಡಲು ಮಾತ್ರ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವೈ. ಸತ್ಯಕುಮಾರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ನಾವು ಎಂತಹ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ! ಅಂತಹ ಅದೃಷ್ಟದ ಪೀಳಿಗೆಯಾದ ನಾವು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ. ನಾವು ಅಧಿಕೃತವಾಗಿ ರಾಮ ರಾಜ್ಯಕ್ಕೆ ಕಾಲಿಡುತ್ತಿದ್ದೇವೆ. ಜೈ ಶ್ರೀರಾಮ್ ಎಂದು ಬೀನಾ ರಾಮೋಲಾ ಎನ್ನುವ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಹರ್ಷ ಪಗ್ಧಾರ್ ಎನ್ನುವವರು, ಅಯೋಧ್ಯೆಯಲ್ಲಿ ಆಗುತ್ತಿರುವವ ಭೂಮಿ ಪೂಜೆಯು ಹೋರಾಟವಲ್ಲ ಆದರೆ ಹಳೆಯ ಜೀವಂತ ಮಾನವ ನಾಗರಿಕತೆಯ ಮುರಿಯದ ಸರಪಳಿಯಲ್ಲಿ ಅದ್ಭುತವಾದ ಹೊಸ ಅಧ್ಯಾಯ ಪ್ರಾರಂಭವಾಗಿದೆ. ರಾಮ ಮಂದಿರಕ್ಕಾಗಿ ಹೋರಾಡಿದ ಎಲ್ಲರಿಗೂ ನಮಸ್ಕರಿಸುತ್ತೇನೆ ಎಂದಿದ್ದಾರೆ.

500 ವರ್ಷಗಳ ವನವಾಸ ಮುಗಿದಿದೆ, ರಾಮರಾಜ್ಯ ಪ್ರಾರಂಭವಾಗುತ್ತದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

500 ವರ್ಷಗಳ ಸುದೀರ್ಘ ಕಾಯುವಿಕೆ ಮುಗಿದ ನಂತರ ಕೊನೆಗೂ ಲಾರ್ಡ್ ರಾಮ ಅಯೋಧ್ಯೆಗೆ ಆಗಮಿಸಿದ್ದಾನೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಟ್ರೆಂಡ್ ಆಗಿರುವ ಹ್ಯಾಷ್‌ಟ್ಯಾಗ್‌ಗಲ್ಲಿ ಬಳೆದಾರರು ಮಾಡಿರುವ ಟ್ವೀಟ್‌ಗಳು ಇಲ್ಲಿವೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT