ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಲವು ರಾಜ್ಯಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮತ್ತು ಚುನಾವಣಾ ಅಧಿಕಾರಿಗಳು ಮೃತಪಟ್ಟಿರುವ ಸಂಬಂಧ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಎಲ್ಒಗಳ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಹೇರುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಿ, ಮೃತಪಟ್ಟವರಿಗೆ ನನ್ನ ಸಂತಾಪಗಳು ಎಂದಿದ್ದಾರೆ.
.ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತ.ಸನಾತನ ಧರ್ಮ ಉತ್ತೇಜಿಸಲು ಕ್ರಮ: ಬಿಹಾರ ಸರ್ಕಾರದಿಂದ 38 ಸಂಚಾಲಕರ ನೇಮಕ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಇಷ್ಟು ತರಾತುರಿಯಲ್ಲಿ ಮಾಡುತ್ತಿರುವುದು ಏಕೆ?, ಈ ಆತುರದ ಹಾಗೂ ಬಲವಂತದ ಎಸ್ಐಆರ್ ಕ್ರಮವು ನೋಟು ರದ್ಧತಿ ಹಾಗೂ ಕೋವಿಡ್ ಸಮಯವನ್ನು ನೆನಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಮಯದಲ್ಲಿ 19 ದಿನಗಳಲ್ಲಿ 16 ಬಿಎಲ್ಒಗಳು ಮೃತಪಟ್ಟಿದ್ದಾರೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
.ಹೈಕಮಾಂಡ್ ಸೂಚಿಸಿದರೂ ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಡಲ್ಲ: ಜಗದೀಶ ಶೆಟ್ಟರ್.Video| ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂದಾನ: ಭಾವಿ ಪತಿಯೊಂದಿಗೆ ಭರ್ಜರಿ ಡ್ಯಾನ್ಸ್.
ಬಿಜೆಪಿ ಕದ್ದ ಅಧಿಕಾರದ ಫಲವನ್ನು ಅನುಭವಿಸುವಲ್ಲಿ ನಿರತವಾಗಿದೆ. ಆದರೆ ಚುನಾವಣಾ ಆಯೋಗವು ಮೂಕ ಪ್ರೇಕ್ಷಕರಂತೆ ನೋಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಎಲ್ಒ ಅವರ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಇದು ನಿಜವಾಗಿಯೂ ಆತಂಕಕಾರಿ ಎಂದಿದ್ದಾರೆ.

ಆದರೆ ಬಿಜೆಪಿಯ ಮುಖಂಡ ರಾಹುಲ್ ಸಿನ್ಹಾ ಅವರು ಈ ಆತ್ಮಹತ್ಯೆ ಪತ್ರ 'ನಕಲಿ' ಎಂದಿದ್ದಾರೆ.
.ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ ಆಪ್ತ ಸಹಾಯಕನ ಪತ್ನಿ ಆತ್ಮಹತ್ಯೆ: ಕಿರುಕುಳ ಆರೋಪ.ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್: ಫೈನಲ್ಗೆ ಲಗ್ಗೆಯಿಟ್ಟ ಲಕ್ಷ್ಯ ಸೇನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.