ಮುಂಬೈ (ಎಎಫ್ಪಿ/ಪಿಟಿಐ): ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಬುಧವಾರ ಭಾರತಕ್ಕೆ ಆಗಮಿಸಿದರು. ಇದು ಭಾರತಕ್ಕೆ ಅವರ ಚೊಚ್ಚಲ ಪ್ರವಾಸ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾರ್ಮರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲದೆ, ಅವರ ಭೇಟಿಯನ್ನು ಐತಿಹಾಸಿಕ ಎಂದು ಮೋದಿ ಬಣ್ಣಿಸಿದರು.

ಜುಲೈನಲ್ಲಿ ಭಾರತ ಮತ್ತು ಬ್ರಿಟನ್ ನಡುವೆ ಲಂಡನ್ನಲ್ಲಿ ಮಹತ್ವದ ವ್ಯಾಪಾರ ಒಪ್ಪಂದ ಏರ್ಪಟ್ಟಿತ್ತು. ಅದಾದ ಬಳಿಕ ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರು ಎರಡು ದಿನಗಳ ಮಟ್ಟಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಭಾರತಕ್ಕೆ ಬರುತ್ತಿದ್ದಂತೆ ಸ್ಟಾರ್ಮರ್ ಅವರು, ‘ಭಾರತದಲ್ಲಿ ಅಪೂರ್ವವಾದ ಅವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತವು 2028ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಲಿದೆ. ಅವರೊಂದಿಗಿನ ವ್ಯಾಪಾರವು ತ್ವರಿತ ಮತ್ತು ಅಗ್ಗವಾಗಲಿದ್ದು, ಅಪೂರ್ವವಾದ ಅವಕಾಶಗಳು ತೆರೆದುಕೊಳ್ಳುತ್ತವೆ. ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವು ಪರಸ್ಪರರ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದರು.

ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು, ‘ಭಾರತಕ್ಕೆ ಐತಿಹಾಸಿಕ ಭೇಟಿ ನೀಡಿರುವ ಸ್ಟಾರ್ಮರ್ ಅವರಿಗೆ ಸ್ವಾಗತ. ಬ್ರಿಟನ್ನಿಂದ ಅತಿದೊಡ್ಡ ವ್ಯಾಪಾರ ನಿಯೋಗದ ಜತೆಗೆ ಬಂದಿರುವ ಅವರು ಎರಡು ದೇಶಗಳ ನಡುವಿನ ಭವಿಷ್ಯವನ್ನು ಸಮೃದ್ಧಗೊಳಿಸುವ ಆಶಯ ಹೊಂದಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಟಾರ್ಮರ್ ಅವರ ಜತೆಗೆ 125 ಸದಸ್ಯರ ನಿಯೋಗ ಬಂದಿದ್ದು, ಅದರಲ್ಲಿ ಬ್ರಿಟಿಷ್ ಏರ್ವೇಸ್ ಮುಖ್ಯ ಕಾರ್ಯನಿರ್ವಾಹಕ ಸೀನ್ ಡಾಯ್ಲ್ ಅವರೂ ಇದ್ದಾರೆ. ‘ಇತ್ತೀಚೆಗೆ ಎರಡೂ ದೇಶಗಳು ಮಾಡಿಕೊಂಡಿರುವ ವ್ಯಾಪಾರ ಒಪ್ಪಂದ ಅತಿದೊಡ್ಡದಾಗಿದ್ದು, ಈಗಾಗಲೇ ಅವಕಾಶಗಳು ತೆರೆದುಕೊಳ್ಳುತ್ತಿವೆ. ವರ್ಷದಿಂದ ಭಾರತದ ಜತೆಗಿನ ವ್ಯಾಪಾರ ಅಗಾಧವಾಗಿ ಹೆಚ್ಚಾಗಿದ್ದು, ಏರುಗತಿಯಲ್ಲಿ ಸಾಗಿದೆ’ ಎಂದು ಡಾಯ್ಲ್ ಪ್ರತಿಕ್ರಿಯಿಸಿದರು.

ಬ್ರಿಟನ್ನ ವ್ಯಾಪಾರದ ಪ್ರಮುಖ ನಾಯಕರು, ಉದ್ಯಮಿಗಳು, ವಿಶ್ವವಿದ್ಯಾಲಯಗಳ ಕುಲಪತಿಗಳು ಈ ನಿಯೋಗದಲ್ಲಿದ್ದಾರೆ. ಎರಡು ದಿನಗಳ ಭಾರತ ಭೇಟಿಯಲ್ಲಿ ಉಭಯ ದೇಶಗಳ ನಡುವೆ ಮಹತ್ವದ ಮಾತುಕತೆಗಳು ನಡೆಯಲಿವೆ.

ಯಶ್ ರಾಜ್ ಫಿಲ್ಮ್ ಸ್ಟುಡಿಯೊಗೆ ಭೇಟಿ

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಮುಂಬೈನ ಅಂಧೇರಿಯಲ್ಲಿರುವ ಯಶ್ ರಾಜ್ ಫಿಲ್ಮ್ ಸ್ಟುಡಿಯೊಗೆ ಬುಧವಾರ ಭೇಟಿ ನೀಡಿದರು. ಇದು ಬಾಲಿವುಡ್ನ ಪ್ರಮುಖ ನಿರ್ಮಾಣ ಕೇಂದ್ರ. ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಬಲಪಡಿಸುವುದು ಮತ್ತು ಬ್ರಿಟನ್– ಭಾರತದ ಚಲನಚಿತ್ರೋದ್ಯಮಗಳ ನಡುವಿನ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಈ ಭೇಟಿ ಹೊಂದಿದೆ. ‘ಮುಂದಿನ ವರ್ಷದಿಂದ ಬ್ರಿಟನ್ನಲ್ಲಿ ಬಾಲಿವುಡ್ನ ಮೂರು ಹೊಸ ಬ್ಲಾಕ್ಬಾಸ್ಟರ್ಗಳು ನಿರ್ಮಾಣವಾಗಲಿವೆ’ ಎಂದು ಅವರು ಈ ವೇಳೆ ಮಾಹಿತಿ ನೀಡಿದರು.

‘ಬಾಲಿವುಡ್ ಬ್ರಿಟನ್ಗೆ ಮರಳಲಿದೆ. ಇದು ಹಲವು ಉದ್ಯೋಗಗಳು ಹೂಡಿಕೆ ಅವಕಾಶಗಳನ್ನು ತರಲಿದೆ. ಇದರ ಪರಿಣಾಮ ಬ್ರಿಟನ್ ಜಾಗತಿಕ ಚಲನಚಿತ್ರ ನಿರ್ಮಾಣಕ್ಕಾಗಿ ವಿಶ್ವ ದರ್ಜೆಯ ತಾಣವಾಗಲಿದೆ’ ಎಂದು ಅವರು ಹೇಳಿದರು. ಬಳಿಕ ಅವರು ದಕ್ಷಿಣ ಮುಂಬೈನ ಫುಟ್ಬಾಲ್ ಮೈದಾನದಲ್ಲಿ ಇಂಗ್ಲಿಷ್ ಪ್ರೀಮಿಯರ್ ಲೀಗ್ ಆಯೋಜಿಸಿದ್ದ ಫುಟ್ಬಾಲ್ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲಿ ಅವರು ಯುವ ಭಾರತೀಯ ಫುಟ್ಬಾಲ್ ಆಟಗಾರರು ಮತ್ತು ತರಬೇತಿದಾರರ ಜತೆ ಮಾತುಕತೆ ನಡೆಸಿದರು. ‘ಪ್ರೀಮಿಯರ್ ಲೀಗ್ ಬ್ರಿಟನ್ನ ಯಶಸ್ವಿ ಸಾಂಸ್ಕೃತಿಕ ರಫ್ತುಗಳಲ್ಲಿ ಒಂದಾಗಿದೆ. ಇದರಿಂದ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ ಅಲ್ಲದೆ ಆರ್ಥಿಕತೆಗೂ ಅಪಾರ ಕೊಡುಗೆ ದೊರೆಯುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.