ಹೈದರಾಬಾದ್: ‘ಫಾರ್ಮುಲಾ ಇ’ ರೇಸ್ಗೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ಅವರು ಇಂದು (ಗುರುವಾರ) ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಚೆಗೆ ಪ್ರಕರಣ ಸಂಬಂಧ ಜ.16ರಂದು ವಿಚಾರಣೆಗೆ ಹಾಜರಾಗುವಂತೆ ಕೆಟಿಆರ್ ಅವರಿಗೆ ಇ.ಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು.

ಜ.7ರಂದು ತನಿಖೆಗೆ ಹಾಜರಾಗುವಂತೆ ಕೆಟಿಆರ್ ಅವರಿಗೆ ಈ ಹಿಂದೆ ಇ.ಡಿ. ಸಮನ್ಸ್ ನೀಡಲಾಗಿತ್ತು. ‘ತನಿಖೆಗೆ ಹಾಜರಾಗಲು ಎರಡು ವಾರಗಳ ಅವಕಾಶ ನೀಡಬೇಕು ಎಂದು ಕೆಟಿಆರ್ ಅವರು ಮನವಿ ಮಾಡಿದ್ದಾರೆ. ಆದ್ದರಿಂದ, ಈಗ ಮತ್ತೊಮ್ಮೆ ಸಮನ್ಸ್ ನೀಡಲಾಗಿದೆ’ ಎಂದು ಮೂಲಗಳು ಹೇಳಿದ್ದವು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಭ್ರಷ್ಟಾಚಾರ ತಡೆ ಘಟಕ (ಎಸಿಬಿ) ಕೂಡ ಪ್ರಕರಣ ದಾಖಲಿಸಿಕೊಂಡಿದೆ. ಎಸಿಬಿ ದಾಖಲಿಸಿದ ಎಫ್ಐಆರ್ ಅನ್ನು ರದ್ದು ಮಾಡಬೇಕು ಎಂದು ಕೆಟಿಆರ್ ಅವರು ತೆಲಂಗಾಣ ಹೈಕೋರ್ಟ್ಗೆ ಕೋರಿದ್ದರು. ಆದರೆ, ಮಂಗಳವಾರ ಆದೇಶ ನೀಡಿರುವ ಹೈಕೋರ್ಟ್, ಎಫ್ಐಆರ್ ಅನ್ನು ರದ್ದು ಮಾಡಲು ನಿರಾಕರಿಸಿದೆ.
.ಫಾರ್ಮುಲಾ-ಇ ರೇಸ್ನಲ್ಲಿ ಅಕ್ರಮ: ಕೆ.ಟಿ. ರಾಮರಾವ್ ವಿರುದ್ಧ ಎಫ್ಐಆರ್.ಫಾರ್ಮುಲಾ ಇ ರೇಸ್ ಅವ್ಯವಹಾರ: KT ರಾಮರಾವ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ.ಫಾರ್ಮುಲಾ ಇ–ರೇಸ್ ಅಕ್ರಮ ಬಿಆರ್ಎಸ್ ನಾಯಕ ವಿಚಾರಣೆ.Formula E-race: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ KTR.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.