ಮುಂಬೈ: ‘ಬುಲ್ಲಿ ಬಾಯಿ’ ಅಪ್ಲಿಕೇಶನ್ನ ನಿಜವಾದ ಸೃಷ್ಟಿಕರ್ತ ಮತ್ತು ಅದರ ಮಾಸ್ಟರ್ಮೈಂಡ್ ನಾನು. ಈಗ ಬಂಧಿಸಿರುವ ಅಮಾಯಕರನ್ನು ಬಿಟ್ಟುಬಿಡಿ,’ ಎಂದು ಟ್ವಿಟರ್ ಖಾತೆಯೊಂದರಿಂದ ಅನಾಯಮಧೇಯ ವ್ಯಕ್ತಿ ಬುಧವಾರ ಪೋಸ್ಟ್ ಮಾಡಿದ್ದಾರೆ.

100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಹೆಸರಿನ ಆ್ಯಪ್ಗೆ ಅಪ್ಲೋಡ್ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಈ ವರೆಗೆ ಮೂವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:‘ಬುಲ್ಲಿ ಬಾಯಿ’ ಆ್ಯಪ್ನಲ್ಲಿ ಮುಸ್ಲಿಂ ಮಹಿಳೆಯರ ಭಾವಚಿತ್ರ ದುರ್ಬಳಕೆ: ಎಫ್ಐಆರ್

ಉತ್ತರಾಖಂಡದಲ್ಲಿ ಶ್ವೇತಾ ಸಿಂಗ್ (19) ಹಾಗೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ (21) ಎಂಬುವವರನ್ನು ಸೈಬರ್ ಪೊಲೀಸರು ಈಗಾಗಲೇ ಬಂಧಿಸಿದ್ದರು. ಇದರ ಜೊತೆಗೆ ಬುಧವಾರ, ಉತ್ತರಾಖಂಡದ ಮಯಂಕ್ ರಾವಲ್ (21) ಎಂಬುವವರನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಮೂವರ ಬಂಧನವಾದ ಹಿನ್ನೆಲೆಯಲ್ಲಿ @giyu44 ಎಂಬ ಬಳಕೆದಾರರ ಐಡಿ ಇರುವ ಟ್ವಿಟರ್ ಖಾತೆಯ ಮೂಲಕ ಬುಧವಾರ ಸರಣಿ ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ:'ಸುಲ್ಲಿ ಡೀಲ್ಸ್' ಬಳಿಕ 'ಬುಲ್ಲಿ ಬಾಯಿ' ಆ್ಯಪ್, ಮತ್ತೊಂದು ಧರ್ಮದ ಮಹಿಳೆಯರ ಗುರಿ

‘ ಸ್ಲಂಬೈ (ಮುಂಬೈ)ಪೊಲೀಸರೇ ನೀವು ಅಮಾಯಕರನ್ನು ಬಂಧಿಸಿದ್ದೀರಿ. ಬುಲ್ಲಿ ಬಾಯಿಯ ಸೃಷ್ಟಿಕರ್ತ ನಾನು. ನೀವು ಬಂಧಿಸಿರುವವರಿಗೂ, ಬುಲ್ಲಿ ಬಾಯಿಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಆದಷ್ಟು ಬೇಗ ಬಿಡುಗಡೆ ಮಾಡಿ’ ಎಂದು ಟ್ವಿಟರ್ನಲ್ಲಿ ಆಗ್ರಹಿಸಲಾಗಿದೆ.

‘ಬುಲ್ಲಿ ಬಾಯಿ ಪ್ರಾರಂಭವಾದಾಗ ಮುಂದೆ ಅದು ಏನಾಗಬಹುದು ಎಂಬುದರ ಬಗ್ಗೆ ನನಗೆ ತಿಳಿದಿರಲಿಲ್ಲ. ಹೀಗಾಗಿ ನಾನು ನನ್ನ ಸ್ನೇಹಿತರಾದ ವಿಶಾಲ್ ಮತ್ತು ಸ್ವಾತಿಯ ಖಾತೆಗಳನ್ನು ಬಳಸಿಕೊಂಡೆ. ನಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ಅವರಿಗೆ ಇರಲಿಲ್ಲ. ಈಗ ಅವರು ಬಂಧಿಯಾಗಿದ್ದಾರೆ. ಈ ಟ್ವೀಟ್ನ ಕಮೆಂಟ್ನಲ್ಲಿ ನನ್ನನ್ನು ನಿಂದಿಸಲು ಮುಕ್ತ ಅವಕಾಶವಿದೆ,’ ಎಂದು ಮತ್ತೊಂದು ಪೋಸ್ಟ್ ಹಾಕಲಾಗಿದೆ.

ಇದನ್ನೂ ಓದಿ:ಆಳ–ಅಗಲ: ಮಹಿಳೆಯರ ಘನತೆಗೆ ಮಸಿ ಬಳಿಯಲು ‘ಬುಲ್ಲಿ ಬಾಯಿ’ ಹರಾಜು

‘ಯಾರಾದರೂ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದರೆ ನಾನು ವೈಯಕ್ತಿಕವಾಗಿ ಬಂದು ಶರಣಾಗುತ್ತೇನೆ’ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.

ಈ ಟ್ವೀಟ್ಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸ್ ಅಧಿಕಾರಿಗಳು, @giyu44 ಟ್ವಿಟರ್ ಖಾತೆಯ ಜಾಡು ಜಾಲಾಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮ ಸಂಸ್ಥೆ ‘ಹಿಂದೂಸ್ಥಾನ್ ಟೈಮ್ಸ್’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.