ರಾಯ್ಪುರ: ಛತ್ತೀಸ್ಗಢದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಮೊದಲ ಬಾರಿ ಆಯ್ಕೆಯಾಗಿರುವ ಮೂವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದರೊಂದಿಗೆ ರಾಜ್ಯದ ಇತಿಹಾಸದಲ್ಲೇ ಅತ್ಯಧಿಕವೆಂಬಂತೆ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರ ನೇತೃತ್ವದ ಸಚಿವ ಸಂಪುಟದ ಬಲ 14ಕ್ಕೆ ಏರಿಕೆಯಾಗಿದೆ.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಮೆನ್ ಡೆಕಾ ಪ್ರಮಾಣವಚನ ಬೋಧಿಸಿದರು.

ಬಿಜೆಪಿ ಶಾಸಕರಾದ ರಾಜೇಶ್ ಅಗರವಾಲ್, ಗುರು ಖುಷ್ವಂತ್ ಸಾಹೇಬ್ ಮತ್ತು ಗಜೇಂದ್ರ ಯಾದವ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಸಚಿವರಿಗೆ ಖಾತೆ ಹಂಚಿಕೆ ಇನ್ನಷ್ಟೇ ಆಗಬೇಕಿದೆ.

2000ನೇ ಇಸವಿಯಲ್ಲಿ ರಾಜ್ಯ ರಚನೆಯಾದ ಬಳಿಕ 90 ಸದಸ್ಯರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ 13 ಸಚಿವರು ಸಂಪುಟದ ಭಾಗವಾಗಿದ್ದರು.

2023ರಲ್ಲಿ ನಡೆದ ಚುನಾವಣೆಯಲ್ಲಿ 54 ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ಗೆ 35 ಸ್ಥಾನಗಳು ಲಭಿಸಿತ್ತು.
.Mumbai Rains: ಹಳಿಗಳ ಮಧ್ಯೆ ಸಿಲುಕಿಕೊಂಡ ಮೋನೋ ರೈಲು; 782 ಪ್ರಯಾಣಿಕರ ರಕ್ಷಣೆ.ಬಾಂಧವ್ಯ ಸುಧಾರಣೆಗೆ ಪಾಕಿಸ್ತಾನವೇ ಹೊಣೆಗಾರಿಕೆ ಪ್ರದರ್ಶಿಸಬೇಕು: ಶಶಿ ತರೂರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.