ನವದೆಹಲಿ: ‘ಮತ ಕಳವು’ ವಿರುದ್ಧ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ ಪಕ್ಷವು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಭಾರತೀಯ ಚುನಾವಣಾ ಆಯೋಗದ ವಿರುದ್ಧ ವಾಗ್ಬಾಣಗಳ ಮೂಲಕ ಮುಗಿಬಿದ್ದಿದೆ.

ಮತ ಕಳವು ವಿರುದ್ಧ ಇಲ್ಲಿನ ರಾಮ್ಲೀಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಆಯೋಗದ ವಿರುದ್ಧ ರಣಕಹಳೆ ಮೊಳಗಿಸಿದರು. ದೇಶದ ಮೂಲೆ ಮೂಲೆಯಿಂದ ಬಂದಿದ್ದ ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರು, ‘ಸತ್ಯ ಹಾಗೂ ಅಹಿಂಸೆಯ ಮೂಲಕವೇ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುತ್ತೇವೆ’ ಎಂದು ಘೋಷಿಸಿದರು.

ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನಿಂದ ಪಕ್ಷದ ಕಾರ್ಯಕರ್ತರು ಧೃತಿಗೆಡಬೇಕಿಲ್ಲ ಎಂದು ರಾಷ್ಟ್ರೀಯ ನಾಯಕರು ಹುರುಪು ತುಂಬಿದರು. ಬಿಜೆಪಿಯ ಮತ ಕಳವಿನ ವಿರುದ್ಧ ನಾವು ಇಲ್ಲಿ ಮೊಳಗಿಸಿದ ಘೋಷಣೆಗಳು ಪ್ರಧಾನಿ ನರೇಂದ್ರ ಮೋದಿ ಮನೆಯವರೆಗೆ ತಲುಪಬೇಕು ಎಂದೂ ಕಾರ್ಯಕರ್ತರಲ್ಲಿ ಉತ್ಸಾಹ ತಂದರು.

ಸರಣಿ ಮಾಧ್ಯಮಗೋಷ್ಠಿಗಳನ್ನು ನಡೆಸಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಗಳಲ್ಲಿನ ಮತ ಕಳವಿನ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಮತ ಕಳವಿನ ವಿರುದ್ಧ ದೇಶದಾದ್ಯಂತ 5.5 ಕೋಟಿಗೂ ಅಧಿಕ ಸಹಿ ಸಂಗ್ರಹಿಸಿದ ಬಳಿಕ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಇಬ್ಬರು ಚುನಾವಣಾ ಆಯುಕ್ತರಿಗೆ ನೇರ ಎಚ್ಚರಿಕೆ ನೀಡಿದರು. ನಾವು ಅಧಿಕಾರಕ್ಕೆ ಬಂದ ಕೂಡಲೇ ಕಾನೂನು ತಿದ್ದುಮಾಡಿ ನಿಮ್ಮನ್ನು ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದೂ ಎಚ್ಚರಿಸಿದರು.

ಭಾವನಾತ್ಮಕವಾಗಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನಾನು ಮಗನ ಶಸ್ತ್ರಚಿಕಿತ್ಸೆಗೆ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ, ಸಂಸತ್ ಅಧಿವೇಶನ ಹಾಗೂ ರ್ಯಾಲಿಯ ಕಾರಣಕ್ಕೆ ಅಲ್ಲಿಗೆ ಹೋಗಲಿಲ್ಲ. ನನ್ನ ಮಗನಿಗೆ ಏನಾದರೂ ಆಗಬಹುದು. 140 ಕೋಟಿ ಜನರನ್ನು ಉಳಿಸುವ ಹೋರಾಟಕ್ಕೆ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದಾಗ ರಾಹುಲ್ ಹಾಗೂ ಇತರ ನಾಯಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅನಾರೋಗ್ಯದ ನಡುವೆಯೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರ್ಯಾಲಿಯಲ್ಲಿ ಭಾಗಿಯಾದರು.

ಮಗನ ಶಸ್ತ್ರಚಿಕಿತ್ಸೆಗೆ ಹೋಗದ ಖರ್ಗೆ

‘ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಗನನ್ನು ನೋಡಲು ನಾನು ಬೆಂಗಳೂರಿಗೆ ಹೋಗಬೇಕಿತ್ತು. ಆದರೆ, ಮತ ಕಳವಿನಂಥ ದೇಶದ್ರೋಹದಲ್ಲಿ ತೊಡಗಿರುವವರ ವಿರುದ್ಧ ನಡೆಯುತ್ತಿರುವ ರ್ಯಾಲಿಯನ್ನು ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ನನ್ನ ನಿಲುವು ಬದಲಿಸಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಬೆಂಗಳೂರಿಗೆ ಹೋಗುವ ಬಗ್ಗೆ ರಾಹುಲ್ ಅವರಲ್ಲಿ ಹೇಳಿದ್ದೆ. ಬಳಿಕ ರ್ಯಾಲಿ ಬಗ್ಗೆ ಉಲ್ಲೇಖಿಸಿದ್ದೆ. ಮೊನ್ನೆ ನನ್ನ ಮಗನಿಗೆ ಎಂಟು ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆದಿತ್ತು. ನನ್ನ ಪತ್ನಿ, ಮಗಳು ಸೇರಿ ಇತರರು ಅಲ್ಲಿಗೆ ಬರುವಂತೆ ಕೇಳಿಕೊಂಡು ಕರೆ ಮಾಡುತ್ತಿದ್ದರು’ ಎಂದು ಖರ್ಗೆ ಹೇಳಿದರು.

‘ದೇಶದ ಗಡಿಯನ್ನು ರಕ್ಷಿಸುವ ಸೈನಿಕರು ಇದ್ದಾರೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಈ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಸಂಸತ್ ಮತ್ತು ದೊಡ್ಡ ರ್ಯಾಲಿ ಬಿಟ್ಟು ದೆಹಲಿಯಿಂದ ಹೊರ ಹೋಗುವುದು ಸರಿಯಲ್ಲ ಎಂದು ತೀರ್ಮಾನಿಸಿದೆ’ ಎಂದರು.

‘ಮತ ಕಳವು ಅತ್ಯಂತ ದೊಡ್ಡ ದೇಶದ್ರೋಹ. ಈ ದೇಶವು ಮತಕಳ್ಳರಿಗೆ ಕಠಿಣ ಪಾಠ ಕಲಿಸಲಿದೆ. ಕಾಂಗ್ರೆಸ್ ಸಿದ್ಧಾಂತ ಮಾತ್ರ ದೇಶವನ್ನು ಉಳಿಸಬಲ್ಲದು. ಆರ್ಎಸ್ಎಸ್ ಸಿದ್ಧಾಂತವು ದೇಶವನ್ನು ನಾಶ ಮಾಡುತ್ತದೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಬಿಜೆಪಿ-ಆರ್ಎಸ್ಎಸ್ನವರು ಸಂವಿಧಾನವನ್ನು ಕೊನೆಗೊಳಿಸುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಅವರು ಬಡವರನ್ನು ಮತ್ತೆ ಗುಲಾಮರನ್ನಾಗಿ ಮಾಡಲು ಬಯಸುತ್ತಾರೆ. ಈ ಬಿಜೆಪಿ-ಆರ್ಎಸ್ಎಸ್ನವರು ಅಧಿಕಾರಕ್ಕೆ ಬಂದಿರುವುದೇ ಮತ ಕಳ್ಳತನ ಮತ್ತು ದ್ರೋಹದ ಮೂಲಕ. ನಮ್ಮ ಹೋರಾಟ ಈ ದೇಶದ್ರೋಹಿಗಳ ವಿರುದ್ಧ. ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಕಳೆದ 11 ವರ್ಷಗಳಿಂದ ಬಿಜೆಪಿ-ಆರ್ಎಸ್ಎಸ್ ದೇಶದ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನು ದುರ್ಬಲಗೊಳಿಸುವ ಕೆಲಸವನ್ನಷ್ಟೇ ಮಾಡಿದೆ’ ಎಂದು ಅವರು ದೂರಿದರು.

‘ನಾವು ಹಲವು ಚುನಾವಣೆಗಳಲ್ಲಿ ಸೋತಿದ್ದೇವೆ. ಆದರೆ, ನಮ್ಮ ಸಿದ್ಧಾಂತ ಜೀವಂತವಾಗಿದೆ. ಮೋದಿ ಚುನಾವಣೆಯಲ್ಲಿ ಸೋತ ದಿನ, ಅವರ ಹೆಸರು ಮತ್ತು ಕುರುಹು ಅಳಿಸಿಹೋಗುತ್ತದೆ’ ಎಂದು ಅವರು ಹೇಳಿದರು.

’ಮತಪತ್ರ ಮೂಲಕ ಚುನಾವಣೆ ಎದುರಿಸಿ’

ಬ್ಯಾಲಟ್ ಪೇಪರ್ನಲ್ಲಿ (ಮತ ಚೀಟಿ) ನ್ಯಾಯಯುತವಾಗಿ ಚುನಾವಣೆ ಗೆಲ್ಲುವಂತೆ ಬಿಜೆಪಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲು ಹಾಕಿದರು.

ಜನರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲು ಚುನಾವಣಾ ಆಯುಕ್ತರು ಹೇಗೆ ಪಿತೂರಿ ಮಾಡಿದ್ದಾರೆ ಮತ್ತು ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹೆಜ್ಜೆಯನ್ನು ಅನುಮಾನಾಸ್ಪದಗೊಳಿಸಿದ್ದಾರೆ ಎಂಬುದಕ್ಕೆ ಒಂದು ದಿನ ಇಡೀ ದೇಶಕ್ಕೆ ಉತ್ತರಿಸಬೇಕಾಗುತ್ತದೆ. ಚುನಾವಣಾ ಆಯೋಗದ ಸಹಾಯವಿಲ್ಲದೆ ಬಿಜೆಪಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂದೂ ಅವರು ಹೇಳಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಹೆಸರುಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ. ಅವರು ದೇಶದ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರನ್ನು ರಕ್ಷಿಸಲು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಆ ಪ್ರಯತ್ನ ಸಫಲ ಆಗುವುದಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಒಮ್ಮೆ ಬ್ಯಾಲೆಟ್ ಪೇಪರ್ನಲ್ಲಿ ನ್ಯಾಯಯುತ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಬಿಜೆಪಿ ಮತ್ತೆ ಗೆಲ್ಲುವುದೇ ಇಲ್ಲ. ಬಿಜೆಪಿಗೂ ಈ ಸತ್ಯ ತಿಳಿದಿದೆ ಎಂದರು.

‘ಇತಿಹಾಸದಲ್ಲಿ ಮೊದಲ ಬಾರಿಗೆ, ಇಡೀ ವಿರೋಧ ಪಕ್ಷಗಳು ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ ಎಂದು ಒಕ್ಕೊರಲಿನಿಂದ ಹೇಳಿವೆ. ಚುನಾವಣಾ ವೇಳಾಪಟ್ಟಿ ಘೋಷಣೆ, ಮತದಾರರ ಪಟ್ಟಿ ಪರಿಷ್ಕರಣೆ, ಮಾದರಿ ನೀತಿ ಸಂಹಿತೆ, ಪ್ರಚಾರ, ಮತದಾನ, ಎಣಿಕೆ, ಇವಿಎಂಗಳು ಮತ್ತು ಫಲಿತಾಂಶಗಳಿಂದ ಹಿಡಿದು ಪ್ರತಿಯೊಂದು ಹೆಜ್ಜೆಯನ್ನೂ ಚುನಾವಣಾ ಆಯುಕ್ತರು ಅನುಮಾನಾಸ್ಪದವಾಗಿಸಿದ್ದಾರೆ ಎಂದು ಪ್ರಿಯಾಂಕಾ ದೂಷಿಸಿದರು.

‘ಬಿಜೆಪಿಯು ಮತ ಕಳವಿನಲ್ಲಿ ತೊಡಗಿದ್ದ ಕಾರಣಕ್ಕೆ ರಾಹುಲ್ ಅವರು ಬಿಹಾರದಲ್ಲಿ ಯಾತ್ರೆ ನಡೆಸಿದರು. ಇದೀಗ ಉತ್ತರ ಪ್ರದೇಶದಲ್ಲೂ ಇಂತಹುದೇ ಕಳವು ನಡೆಯುತ್ತಿದೆ. ರಾಜ್ಯದಲ್ಲಿ ಮೂರು ಕೋಟಿ ಮತದಾರರನ್ನು ಪಟ್ಟಿಯಿಂದ ಅಳಿಸಿ ಹಾಕುವ ಷಡ್ಯಂತ್ರ ನಡೆದಿದೆ’ ಎಂದು ಅವರು ಆರೋಪಿಸಿದರು.

‘ಕರ್ನಾಟಕ, ಮಹಾರಾಷ್ಟ್ರ ಹಾಗೂ ಹರಿಯಾಣದ ಮತ ಕಳವಿನ ಬಗ್ಗೆ ರಾಹುಲ್ ಪುರಾವೆಗಳನ್ನು ನೀಡಿದರು. ಬಿಹಾರದಲ್ಲಿ 65 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾಯಿತು. ಇಷ್ಟೇ ಅಲ್ಲದೇ, ಮಾದರಿ ನೀತಿ ಸಂಹಿತೆ ಸಮಯದಲ್ಲಿ ಜನರ ಬ್ಯಾಂಕ್ ಖಾತೆಗೆ ತಲಾ ₹10 ಸಾವಿರ ವರ್ಗಾಯಿಸಲಾಯಿತು. ಇದು ಮತ ಕಳ್ಳತನ ಅಲ್ಲದಿದ್ದರೆ ಮತ್ತೇನು’ ಎಂದು ಪ್ರಶ್ನಿಸಿದರು.

‘ಸತ್ಯದಿಂದ ಸರ್ಕಾರ ಕಿತ್ತೆಸೆಯುತ್ತೇವೆ’

‘ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ. ಆಯೋಗವು ಭಾರತದ ಚುನಾವಣಾ ಸಂಸ್ಥೆಯೇ ಹೊರತು ಪ್ರಧಾನಿಯವರದ್ದಲ್ಲ ಎಂದು ನೆನಪಿಸಿಕೊಳ್ಳಬೇಕು’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.

ಮತಗಳ ಕಳ್ಳತನವಾಗದಿದ್ದರೆ ಜನರು ಐದು ನಿಮಿಷಗಳಲ್ಲೇ ಆರ್ಎಸ್ಎಸ್ ಸರ್ಕಾರವನ್ನು ಕಿತ್ತೆಸೆಯುತ್ತಾರೆ. ಕಾಂಗ್ರೆಸ್ ಪಕ್ಷವು ಸತ್ಯ ಮತ್ತು ಅಹಿಂಸೆ ಬಳಸಿ ಆರ್ಎಸ್ಎಸ್ ಸರ್ಕಾರವನ್ನು ತೆಗೆದು ಹಾಕಲಿದೆ ಎಂದರು. ಮತ ಕಳವು ಎಂಬುದು ಅಂಬೇಡ್ಕರ್ ಅವರ ಸಂವಿಧಾನದ ಮೇಲಿನ ಬಹುದೊಡ್ಡ ದಾಳಿ ಎಂದು ಅವರು ಪ್ರತಿಪಾದಿಸಿದರು.

ಮೂವರು ಚುನಾವಣಾ ಆಯುಕ್ತರ ಹೆಸರನ್ನು ಉಲ್ಲೇಖಿಸಿದ ಅವರು, ‘ಕೇಂದ್ರದ ಬಿಜೆಪಿ ಸರ್ಕಾರ ವಹಿಸಿದ ಎಲ್ಲ ಕೆಲಸಗಳನ್ನು ಆಯೋಗ ಮಾಡುತ್ತಿದೆ. ಸರ್ಕಾರವು 2023ರಲ್ಲಿ ಕಾನೂನು ತಿದ್ದುಪಡಿ ತಂದು ಅವರಿಗೆ ವಿನಾಯಿತಿಗಳನ್ನು ನೀಡಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷವು ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಕಾನೂನನ್ನು ಬದಲಿಸಲಿದೆ ಮತ್ತು ಈ ಮೂವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ’ಎಂದು ಅವರು ಎಚ್ಚರಿಸಿದರು.

‘ನಾವು ಸತ್ಯದ ಪರವಾಗಿ ನಿಲ್ಲುತ್ತೇವೆ ಮತ್ತು ನರೇಂದ್ರ ಮೋದಿ-ಆರ್ಎಸ್ಎಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕುತ್ತೇವೆ. ಅವರ ಬಳಿ ಅಧಿಕಾರ ಇದೆ ಮತ್ತು ಅವರು ‘ಮತ ಚೋರಿ’ಯಲ್ಲಿ ತೊಡಗಿದ್ದಾರೆ. ಮತ ಕಳವು ಅವರ ಡಿಎನ್ಎಯಲ್ಲೇ ಇದೆ. ಚುನಾವಣಾ ಆಯೋಗವು ಭಾರತದ ಚುನಾವಣಾ ಆಯೋಗವೇ ಹೊರತು ಮೋದಿ ಅವರ ಚುನಾವಣಾ ಆಯೋಗವಲ್ಲ ಎಂಬುದನ್ನು ಮರೆಯಬಾರದು’ ಎಂದರು.

‘ಮೋದಿಯವರ ಮುಖ ನೋಡಿ, ಅವರ ಆತ್ಮವಿಶ್ವಾಸ ಖಾಲಿಯಾಗಿದೆ ಎಂದು ನಿಮಗೆ ಅರಿವಾಗುತ್ತದೆ. ಅಧಿಕಾರದಲ್ಲಿರುವವರೆಗೆ ಮಾತ್ರ ಅವರು ಧೈರ್ಯಶಾಲಿಗಳು. ಅಧಿಕಾರ ಹೋದ ದಿನವೇ ಅವರ ಧೈರ್ಯ ಉಡುಗಿ ಹೋಗುತ್ತದೆ’ ಎಂದು ಅವರು ವ್ಯಂಗ್ಯವಾಡಿದರು.

‘ನುಸುಳುಕೋರರ ರಕ್ಷಿಸಲು ಪ್ರಯತ್ನ’

ಕಾಂಗ್ರೆಸ್ ಪಕ್ಷವು ‘ನುಸುಳುಕೋರರನ್ನು ರಕ್ಷಿಸಲು’ ಈ ರ್ಯಾಲಿ ಆಯೋಜಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಜನರನ್ನು ದಾರಿತಪ್ಪಿಸುವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ‘ಅವಮಾನಿಸುವ’ ತನ್ನ ಉದ್ದೇಶದಲ್ಲಿ ಕಾಂಗ್ರೆಸ್ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಸಂಸತ್ನಲ್ಲಿ ಸಮಗ್ರ ಚರ್ಚೆ ನಡೆದಿದೆ. ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ನ ಸುಳ್ಳು ಆರೋಪಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದಾದ ಬಳಿಕವೂ ಈ ವಿಷಯವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ. ಕಾಂಗ್ರೆಸ್ನ ರ್ಯಾಲಿಯು ಅಕ್ರಮ ನುಸುಳುಕೋರರನ್ನು ರಕ್ಷಿಸುವ ಗುರಿ ಹೊಂದಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.

‘ಇತಿಹಾಸ ಸೇರಲಿದೆ’

ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಅವರ ಸಾವು ಬಯಸಿ ಘೋಷಣೆ ಕೂಗಿದ್ದಾರೆ ಎಂಬ
ಪೋಸ್ಟ್ಗಳನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಬಿಜೆಪಿಯ ಸುಧಾಂಶು ತ್ರಿವೇದಿ, ‘ಕಾಂಗ್ರೆಸ್ ಕಾರ್ಯಕರ್ತರು ಮತ್ತೊಮ್ಮೆ ಮೋದಿಯವರ ಸಾವು ಬಯಸಿದ್ದಾರೆ. ರಾಹುಲ್ ನಾಯಕತ್ವ
ದಲ್ಲಿ ಕಾಂಗ್ರೆಸ್, ಇತಿಹಾಸ ಸೇರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.