ನವದೆಹಲಿ: ಗದ್ದಲದ ಕಾರಣದಿಂದಾಗಿ ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಮೇಯರ್, ಉಪಮೇಯರ್ ಚುನಾವಣೆ ಹಾಗೂ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ.

ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್‌ಗಳ ನಡುವಿನ ಗದ್ದಲದಿಂದಾಗಿ ಸದನವನ್ನು ಮುಂದೂಡಲಾಗಿದೆ. ಗದ್ದಲದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಿಜೆಪಿ ಸದಸ್ಯರು, ಅರವಿಂದ ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿ ಎಎಪಿ ಸದಸ್ಯರು ಕುಳಿತಿದ್ದ ಕಡೆ ತೆರಳಿದರು. ಇದಕ್ಕೆ ಪ್ರತಿಯಾಗಿ ಎಎಪಿ ಸದಸ್ಯರು ಘೋಷಣೆ ಕೂಗಿದರು ಈ ಕಾರಣಕ್ಕೆ ಸಭೆಯನ್ನು ಮುಂದೂಡಲಾಯಿತು ಎಂದು ಮೂಲಗಳು ಹೇಳಿವೆ.

ಇದರೊಂದಿಗೆ ಗದ್ದಲದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ದೆಹಲಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ಮುಂದೂಡಿದಂತಾಗಿದೆ.

ಮೇಯರ್ ಆಯ್ಕೆಗಾಗಿ ಈ ಹಿಂದೆ ಸೇರಿದ್ದ ಸಭೆ ಗದ್ದಲದಲ್ಲಿ ಮುಕ್ತಾಯವಾದ ಕಾರಣ ಮೇಯರ್ ಆಯ್ಕೆ ನಡೆದಿರಲಿಲ್ಲ. ಹೀಗಾಗಿ ಜ.24ಕ್ಕೆ (ಮಂಗಳವಾರ) ಸಭೆ ನಡೆಸಲು ಲೆಫ್ಟಿನಂಟ್ ಗವರ್ನರ್ (ಎಲ್‌ಜಿ) ವಿ.ಕೆ. ಸಕ್ಸೆನಾ ಒಪ್ಪಿಗೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.