ನವದೆಹಲಿ: ‘ದೇಶದ ಭವಿಷ್ಯದ ಯುವಜನತೆಯನ್ನು ಸಿದ್ಧಪಡಿಸಲು ಶಿಕ್ಷಣ ವ್ಯವಸ್ಥೆ ಪರಿಣಾಮಕಾರಿ ಮಾರ್ಗವಾಗಿದೆ. ಅದನ್ನು ಆಧುನೀಕರಣಗೊಳಿಸುವತ್ತ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

YUGM ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆಯನ್ನು ಭಾರತಕ್ಕಾಗಿ ಸಿದ್ಧಪಡಿಸುವುದು ನಮ್ಮ ಗುರಿ’ ಎಂದಿದ್ದಾರೆ.

‘ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತಿನಲ್ಲೇ ಭಾರತ ಮುಂಚೂಣಿಯಲ್ಲಿರುವಂತೆ ಕಲಸ ಮಾಡಬೇಕು. 21ನೇ ಶತಮಾನದ ಅಗತ್ಯಗಳನ್ನು ಪೂರೈಸಲು ದೇಶದ ಶಿಕ್ಷಣ ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘2013–14ರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ₹60 ಸಾವಿರ ಕೋಟಿ ನೀಡಲಾಗುತ್ತಿತ್ತು. ಅದು ಈಗ ₹1.25 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಕಡಿಮೆ ಸಮಯದಲ್ಲಿ ಹೊಸ ಉತ್ಪನ್ನಗಳ ಆಲೋಚನೆ, ಮಾದರಿ ವಿನ್ಯಾಸ ಮತ್ತು ಉತ್ಪನ್ನಗಳ ಅಭಿವೃದ್ಧಿಯಾಗುವ ಕಡೆ ಹೆಜ್ಜೆ ಹಾಕಬೇಕಿದೆ. ಪ್ರತಿಭೆ, ಉತ್ಸಾಹ ಮತ್ತು ತಂತ್ರಜ್ಞಾನದಿಂದ ಭಾರತದ ಭವಿಷ್ಯ ಪರಿವರ್ತನೆಯ ಹಾದಿಯ ಕಡೆ ಹೊರಳಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಭಾರತದ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳು ಯುವಶಕ್ತಿಯ ಹೊಸ ಆವಿಷ್ಕಾರಗಳ ತಾಣಗಳಾಗಿ ಅಭಿವೃದ್ಧಿ ಹೊಂದುತ್ತಿವೆ’ ಎಂದು ಆಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.