ಮುಂಬೈ: ನಕಲಿ ಭಾರತೀಯ ಪಾಸ್ಪೋರ್ಟ್ ಬಳಸಿ ಒಮನ್ಗೆ ತೆರಳಲು ಯತ್ನಿಸಿದ ನೇಪಾಳದ ಮಹಿಳೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ವಾರ ಮಸ್ಕತ್ಗೆ ತೆರಳಲು ಮಹಿಳೆ, ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದ ಕೌಂಟರ್ಗೆ ಬಂದಿದ್ದರು. ಕಾಜಲ್ ಎಂದು ಗುರುತಿಸಿಕೊಂಡ ಅವರು, ಭಾರತೀಯ ಪಾಸ್ಪೋರ್ಟ್ ಸಲ್ಲಿಸಿದ್ದಾರೆ. ಅದರಲ್ಲಿ ಆಕೆಯ ಜನ್ಮಸ್ಥಳ ಹಿಮಾಚಲ ಪ್ರದೇಶದ ನೋಹ್ರಾ ಎಂಬುದಾಗಿ ಉಲ್ಲೇಖಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಆದರೆ, ಆಕೆಯ ಮುಖಲಕ್ಷಣಗಳು ನೇಪಾಳದವರಂತೆ ಕಾಣಿಸಿ, ಅನುಮಾನಗೊಂಡ ಅಧಿಕಾರಿಗಳು ಹೆಚ್ಚಿನ ಪರಿಶೀಲನೆಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಕಳುಹಿಸಿದ್ದಾರೆ. ಅಲ್ಲಿ ವಿಚಾರಣೆ ನಡೆಸಿದಾಗ ಆಕೆ ಭಾರತೀಯರಲ್ಲ, ನೇಪಾಳದ ಪ್ರಜೆ ಎಂದು ಒಪ್ಪಿಕೊಂಡಿದ್ದಾರೆ. ಬಳಿಕ, ಆಕೆಯ ನಿಜವಾದ ಹೆಸರು ಕಾಜಲ್ ಲಾಮಾ ಮತ್ತು ನೇಪಾಳದ ಪಾರ್ಸಾ ಜಿಲ್ಲೆಯವರು ಎಂದು ಹೇಳಿದ್ದಾರೆ.

ತನ್ನ ಪೋಷಕರು ನೇಪಾಳದಿಂದ ಹಿಮಾಚಲ ಪ್ರದೇಶಕ್ಕೆ ವರ್ಷಗಳ ಹಿಂದೆ ವಲಸೆ ಬಂದಿದ್ದರು. ಈ ಹಿನ್ನೆಲೆ ಬಳಸಿಕೊಂಡು ಹಿಮಾಚಲ ಪ್ರದೇಶದ ವಿಳಾಸ ನೀಡಿ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಕಾಜಲ್, ಶಿಮ್ಲಾ ಪಾಸ್ಪೋರ್ಟ್ ಕಚೇರಿಯಲ್ಲಿ ಭಾರತೀಯ ಪಾಸ್ಪೋರ್ಟ್ ಅನ್ನು ಪಡೆದಿದ್ದರು. ವಲಸೆ ಅಧಿಕಾರಿಗಳು ನೀಡಿದ ದೂರಿನನ್ವಯ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.