ನಾಗಪುರ: ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗು ಎಂದು ಬಲವಂತ ಮಾಡಿದ ಯುವಕನನ್ನು, ಪ್ರಿಯತಮೆಯೇ ಕೊಲೆ ಮಾಡಿರುವ ಘಟನೆಯು ನಾಗಪುರದಲ್ಲಿ ಜರುಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ರತಿ ಸಾಹೇಬ್ರಾವ್ ದೇಶಮುಖ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ನಾಲ್ಕನೇ ವರ್ಷದ ಬಿಎಎಂಎಸ್ ವಿದ್ಯಾರ್ಥಿಯಾಗಿದ್ದ ರತಿ ಹಾಗೂ ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಾಜಿ ವಿನಾಯಕ ಕಲ್ಯಾಣ್(28) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ಸಂಬಂಧವನ್ನು ಆರೋಪಿಯ ತಂದೆ ವಿರೋಧಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ ಬಾಲಾಜಿಯು ತನ್ನ ಗೆಳತಿಗೆ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಾನೆ. ಈ ವೇಳೆ ಆರೋಪಿಯು, ಪ್ರಿಯತಮನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ಆರೋಪಿಯು ಭಿನ್ನ ರೀತಿಯ ಹೇಳಿಕೆಗಳನ್ನು ನೀಡಿದ್ದರಿಂದ ಅವಳನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
.ಮದುವೆಗೆ ಹೋಗಲು ವಿಧಾನಸಭೆಗೆ ಚಕ್ಕರ್: ಈ ಋತುವಿನಲ್ಲಿ ಕಲಾಪವೇ ಬೇಡ ಎಂದ ಸಚಿವ..!.ತನ್ನದೇ ಆರತಕ್ಷತೆಗೆ ವಿಡಿಯೊ ಕಾನ್ಪರೆನ್ಸ್ನಲ್ಲಿ ಭಾಗಿಯಾದ ಹುಬ್ಬಳ್ಳಿ ಯುವತಿ.ವಾರ್ನರ್ ಬ್ರೋ ಸ್ಟುಡಿಯೊ ನೆಟ್ಫ್ಲಿಕ್ಸ್ ತೆಕ್ಕೆಗೆ: OTT ಬಳಕೆದಾರರಿಗೆ ಲಾಭವೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.