ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

IndiGo Crisis: ಡಿಜಿಸಿಐನ ನಾಲ್ವರು ಅಧಿಕಾರಿಗಳು ವಜಾ

Published : 12 ಡಿಸೆಂಬರ್ 2025, 7:10 IST
Last Updated : 12 ಡಿಸೆಂಬರ್ 2025, 16:02 IST
ಫಾಲೋ ಮಾಡಿ
Comments
ತಜ್ಞ‌ರ ತಂಡ ನೇಮಕ
ವಿಮಾನ ಸಂಚಾರ ವ್ಯತ್ಯಯಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಅಧ್ಯಯನ ನಡೆಸಲು ಸಂಸ್ಥೆಯ ಹೊರಗಿನ ವಿಮಾನಯಾನ ತಜ್ಞರನ್ನು ನೇಮಿಸಿರುವುದಾಗಿ ಇಂಡಿಗೊ ಶುಕ್ರವಾರ ತಿಳಿಸಿದೆ. ‘ಹಿರಿಯ ವಿಮಾನಯಾನ ತಜ್ಞ ಕ್ಯಾಪ್ಟನ್‌ ಜಾನ್‌ ಇಲ್ಸನ್‌ ನೇತೃತ್ವದ ತಂಡವು ಸ್ವತಂತ್ರವಾಗಿ ಅಧ್ಯಯನ ನಡೆಸಿ ವರದಿ ನೀಡಲಿದೆ’ ಎಂದು ಇಂಡಿಗೊ ಹೇಳಿದೆ.
ಸಿಸಿಐ ಪರಿಶೀಲನೆ
ದೇಶದ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂಬ ಬಗ್ಗೆ ‍ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಪರಿಶೀಲನೆ ನಡೆಸುತ್ತಿದೆ.  ವಿಮಾನಯಾನ ಸೇವಯ‌ಲ್ಲಿ ಇಂಡಿಗೊ ಮೆರೆದಿರುವ ಪ್ರಾಬಲ್ಯ ಯಾವೆಲ್ಲ ಮಾರ್ಗದಲ್ಲಿ ಪ್ರಾಬಲ್ಯ ಹೆಚ್ಚಿದೆ ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ದೂರುಗಳು ಬಂದಿಲ್ಲ. ಆದರೆ ಸಿಸಿಐ ಸ್ವಯಂಪ್ರೇರಿತವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT