ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಕಳ್ಳತನ ಮಾಡಿ ಮಾರುತ್ತಿದ್ದ ಅಂತರರಾಜ್ಯ ಗ್ಯಾಂಗ್ ತೆಲಂಗಾಣದಲ್ಲಿ ಬಂಧನ

ಮಕ್ಕಳನ್ನು ಕದ್ದು ಅವುಗಳನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಒಂದನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
Published 28 ಮೇ 2024, 13:35 IST
Last Updated 28 ಮೇ 2024, 13:35 IST
ಅಕ್ಷರ ಗಾತ್ರ

ಹೈದರಾಬಾದ್: ಮಕ್ಕಳನ್ನು ಕದ್ದು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಒಂದನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

13 ಮಕ್ಕಳನ್ನು ರಕ್ಷಿಸಿರುವ ರಾಚಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಿದ್ದಾರೆ.

‘ಮಕ್ಕಳ ಕಳ್ಳತನದ ಗ್ಯಾಂಗ್ ತೆಲಂಗಾಣದಲ್ಲಿ ಸಕ್ರಿಯ ಆಗಿರುವ ದೂರಿನ ಜಾಡು ಹಿಡಿದು ತನಿಖೆ ನಡೆಸಲಾಗಿತ್ತು. ಮೇ 21 ರಂದು ಮೂವರನ್ನು ಬಂಧಿಸಲಾಗಿತ್ತು. ಅವರು ನೀಡಿದ ಸುಳಿವಿನ ಆಧಾರದ ಮೇಲೆ ಮೇ 26ರಂದು ಮತ್ತೆ 8 ಜನರನ್ನು ಬಂಧಿಸಲಾಗಿದೆ’ ಎಂದು ರಾಚಕೊಂಡ ಪೊಲೀಸ್ ಕಮಿಷನರ್ ತರುಣ್ ಜೋಶಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ರಕ್ಷಿಸಲಾಗಿರುವ ಮಕ್ಕಳಲ್ಲಿ ನಾಲ್ಕು ಗಂಡು ಹಾಗೂ ಒಂಬತ್ತು ಹೆಣ್ಣು ಸೇರಿವೆ. ಆರೋಪಿಗಳು ದೆಹಲಿ, ಪುಣೆಯಲ್ಲಿ ಸಕ್ರಿಯರಾಗಿರುವ ಮಕ್ಕಳ ಕಳ್ಳತನದ ಗ್ಯಾಂಗ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅಲ್ಲಿಂದ ಇವರು ಸುಮಾರು 50 ಮಕ್ಕಳನ್ನು ಕದ್ದು ಮಾರಾಟ ಮಾಡಿದ್ದಾರೆ. ಕದ್ದ ಮಕ್ಕಳನ್ನು ತೆಲಂಗಾಣ ಸೇರಿದಂತೆ ಬೇರೆ ಬೇರೆ ಕಡೆ ಮಕ್ಕಳಿಲ್ಲದವರಿಗೆ ಲಕ್ಷಾಂತರ ರೂಪಾಯಿ ತೆಗೆದುಕೊಂಡು ಮಾರಾಟ ಮಾಡುತ್ತಿದ್ದರು’ ಎಂದು ತಿಳಿಸಿದ್ದಾರೆ.

ರಕ್ಷಿಸಲಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಘಟಕದಲ್ಲಿ ಇರಿಸಲಾಗಿದ್ದು ವಿಸ್ತೃತ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT