ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಲಲಿತ್ ಮೋದಿ ಸೋದರ ಸಂಬಂಧಿ ಸಮೀರ್ ಮೋದಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.

ಈ ಅರ್ಜಿಯ ವಿಚಾರಣೆಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಪಿನ್ ಖಾರ್ಬ್ ನಡೆಸಿದರು.

₹5 ಲಕ್ಷ ವೈಯಕ್ತಿಕ ಹಾಗೂ ಭದ್ರತಾ ಬಾಂಡ್, ದೇಶವನ್ನು ಬಿಟ್ಟು ಹೋಗದಿರುವುದು, ವಿಚಾರಣೆಗೆ ಹಾಜರಾಗುವುದು, ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗದಿರುವುದು ಸೇರಿದಂತೆ ಸಾಕ್ಷ್ಯಗಳನ್ನು ಹಾಳು ಮಾಡದಂತೆ ಇತರೆ ಷರತ್ತುಗಳ ಅನ್ವಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
.ಗುತ್ತಿಗೆ ಪ್ರದೇಶದ ಗಡಿ ನಿರ್ಧರಿಸಲು ಸಮಿತಿ ರಚಿಸಿದ ಸುಪ್ರೀಂ ಕೋರ್ಟ್.ಕಸ್ಟಡಿ ಸಾವು: ಮಧ್ಯಪ್ರದೇಶ ಸರ್ಕಾರ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ತಪರಾಕಿ.
ಸಂತ್ರಸ್ತೆಯ ಮೇಲೆ ಪ್ರಭಾವ ಬೀರಬಹುದು ಮತ್ತು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ಪರ ವಕೀಲರು ವಾದಿಸಿದ್ದರು. ಈ ವೇಳೆ ಸಾಕ್ಷ್ಯಗಳು ಧೃಡಪಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಇನ್ನು ಮುಂದೆ ಸಮೀರ್ ಮೋದಿ ಕಸ್ಟಡಿಯಲ್ಲಿ ಇರುವ ಅಗತ್ಯತೆ ಇಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ವಿಪಿನ್ ತಿಳಿಸಿದ್ದಾರೆ.
.ಬಿಹಾರ: ಮಹಿಳೆಯರ ಜತೆ ಪ್ರಿಯಾಂಕಾ ಸಂವಾದ.ತಿರುಮಲ: ದೇಶದಲ್ಲಿಯೇ ಮೊದಲ ಬಾರಿ AI ಆಧರಿತ ಕಮಾಂಡ್–ಕಂಟ್ರೋಲ್ ಕೇಂದ್ರ ಸ್ಥಾಪನೆ.ಸ್ವಾಮೀಜಿ ಮೇಲೆ ಆರೋಪ: ವಿದ್ಯಾರ್ಥಿಗಳು ಸುರಕ್ಷಿತ, ತನಿಖೆ ಪ್ರಗತಿಯಲ್ಲಿ; ಸಂಸ್ಥೆ.ಮಹಾರಾಷ್ಟ್ರ: ಒಬಿಸಿ ಕೋಟಾ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.