ಕೊಚ್ಚಿ: ಕೋಯಿಕ್ಕೋಡ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮಲಪ್ಪುರಂ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಯು. ಅಬ್ದುಲ್ ಕರೀಮ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ.

ಅಲ್ಲದೆ ಮಲಪ್ಪುರಂ ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಅವರಿಗೆ ಕೂಡ ಸೋಂಕು ತಗುಲಿದೆ. ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ 18 ಜನರನ್ನು ಸಾವಿಗೆ ಕಾರಣವಾದ ವಿಮಾನ ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡದ ಭಾಗವಾಗಿದ್ದ ಇಬ್ಬರಿಗೂ ಸೋಂಕು ದೃಢಪಟ್ಟಿದೆ. ಸದ್ಯ ಕರೀಮ್ ಮತ್ತು ಗೋಪಾಲಕೃಷ್ಣನ್ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಕೇರಳ | ಲ್ಯಾಂಡಿಂಗ್ ವೇಳೆ ವಿಮಾನ ದುರಂತ: ಪೈಲಟ್ಗಳು ಸೇರಿ 17 ಮಂದಿ ಸಾವು

ದುಬೈನಿಂದ ಕೇರಳಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಕನಿಷ್ಠ ಇಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಅಪಘಾತದ ನಂತರ, ಕೇರಳ ಆರೋಗ್ಯ ಸಚಿವಾಲಯವು ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ವೈರಸ್ ಹರಡುವಿಕೆಯ ತಡೆಗೆ ಕ್ವಾರಂಟೈನ್ ಆಗಬೇಕೆಂದು ಹೇಳಿತ್ತು. ವಿಮಾನ ನಿಲ್ದಾಣವಿರುವ ಕೊಂಡೊಟ್ಟಿಯು ಹೆಚ್ಚಿನ ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ವಲಯವಾಗಿದೆ.

ಇದನ್ನೂ ಓದಿ:Covid-19 India Update: ದೇಶದಲ್ಲಿ 17.51 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖ

ಮಲಪ್ಪುರಂ ಜಿಲ್ಲೆಯಲ್ಲಿ ಗುರುವಾರ ಕನಿಷ್ಠ 202 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತುಈ ಪೈಕಿ ನಾಲ್ವರು ಆರೋಗ್ಯ ಕಾರ್ಯಕರ್ತರು ಸೇರಿದಂತೆ 158 ಮಂದಿ ಸೋಂಕಿತರ ಸಂಪರ್ಕದಿಂದಾಗಿ ರೋಗಕ್ಕೆ ತುತ್ತಾಗಿದ್ದಾರೆ.

ಕೇರಳದಲ್ಲಿ ಗುರುವಾರ ಅತಿ ಹೆಚ್ಚಿನ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ನಾಲ್ವರು ಆರೋಗ್ಯ ಕಾರ್ಯಕರ್ತರು ಸೇರಿ ಒಂದೇ ದಿನ 1,564 ಜನರಿಗೆ ಸೋಂಕು ತಗುಲಿದ್ದು, 766 ಜನರು ಗುಣಮುಖರಾಗಿದ್ದಾರೆ. ಈವರೆಗೆ 25,692 ಜನರು ಗುಣಮುಖರಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 39,708ಕ್ಕೆ ಏರಿಕೆಯಾಗಿದೆ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ತಿಳಿಸಿದ್ದಾರೆ.

ಇನ್ನಷ್ಟು...

ಕೇರಳ ವಿಮಾನ ದುರಂತ | ಅವಘಡ ಎಚ್ಚರಿಕೆ ಕಡೆಗಣನೆ: ಚರ್ಚೆ

ಕೇರಳದಲ್ಲಿ ವಿಮಾನ ಅಪಘಾತ | ಅನುಭವಿ ಪೈಲಟ್ ಸಾಠೆ ದುರಂತ ಅಂತ್ಯ

ಕೇರಳ ವಿಮಾನ ದುರಂತ: ಮೃತ ಸಹ ಪೈಲಟ್ ಅಖಿಲೇಶ್ ಕುಮಾರ್ಗೆ ಶ್ರದ್ದಾಂಜಲಿ

ಕೇರಳ ವಿಮಾನ ದುರಂತ | ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ: ಸಚಿವ ಹರದೀಪ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.