ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕಾಶಿ: ಯಂತ್ರ ಬಳಸದೆ ಸುರಂಗ ಕೊರೆಯುವುದು ಹೇಗೆ? ವಿಡಿಯೊ ಬಿಡುಗಡೆ

Published 28 ನವೆಂಬರ್ 2023, 3:25 IST
Last Updated 28 ನವೆಂಬರ್ 2023, 3:25 IST
ಅಕ್ಷರ ಗಾತ್ರ

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಡಿಯಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಯಂತ್ರ ಬಳಸದೆ ಸುರಂಗ ಕೊರೆಯುವ ಕಾರ್ಯ ಆರಂಭವಾಗಿದೆ. ಸಿಬ್ಬಂದಿಯೇ ಯಾವ ರೀತಿ ಸುರಂಗ ಕೊರೆಯುತ್ತಾರೆ, ಅಗರ್ ಯಂತ್ರದ ಮೂಲಕ ಪೈಪ್ ಅನ್ನು ಹೇಗೆ ಒಳಗೆ ತೂರಿಸುತ್ತಾರೆ ಎನ್ನುವ ಬಗ್ಗೆ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ.

ಇಲ್ಲಿಯವರೆಗೆ, ಸುಮಾರು ಎರಡು ಮೀಟರ್‌ನಷ್ಟು ಸುರಂಗವನ್ನು ಅಡ್ಡಲಾಗಿ ಕೊರೆಯುವ ಕೆಲಸ ಪೂರ್ಣಗೊಂಡಿದೆ ಎಂದು ಎಎನ್ಐ ವರದಿ ಮಾಡಿದೆ. 

ಏಕಕಾಲದಲ್ಲಿ, ಸುರಂಗದ ಮೇಲಿನಿಂದ ಲಂಬ ಕೊರೆಯುವಿಕೆಯನ್ನೂ ಮುಂದುವರಿಸಲಾಗಿದ್ದು, ಅಗತ್ಯವಿರುವ 86 ಮೀಟರ್‌ಗಳಲ್ಲಿ 36 ಮೀಟರ್ ಆಳವನ್ನು ತಲುಪಿದೆ.

12 ಗಣಿಗಾರಿಕೆ ತಜ್ಞರು ಯಂತ್ರವಿಲ್ಲದೆ ಸುರಂಗ ಕೊರೆಯುವ ಕೆಲಸದಲ್ಲಿ ತೊಡಗಿದ್ದಾರೆ. 

ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳದಲ್ಲಿ ವೈದ್ಯರ ಹಾಗೂ ಮನಃಶಾಸ್ತ್ರಜ್ಞರ ಒಂದು ತಂಡ ಕೂಡ ಇದೆ. ಸುರಂಗದ ಒಳಗಡೆ ಸಿಲುಕಿರುವ ಕಾರ್ಮಿಕರ ಜೊತೆ ವೈದ್ಯರು ದಿನಕ್ಕೆರಡು ಬಾರಿ ಮಾತನಾಡುತ್ತಾರೆ. ಅಲ್ಲದೆ, ಕುಟುಂಬದ ಸದಸ್ಯರಿಗೆ ಅವರೊಂದಿಗೆ ಯಾವಾಗ ಬೇಕಿದ್ದರೂ ಮಾತನಾಡಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT