ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್ ಅವರು ತೆಲಂಗಾಣ ಸರ್ಕಾರದ ಸಚಿವರಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸೇರಿದಂತೆ ಪ್ರಮುಖ ನಾಯಕರ ಸಮ್ಮುಖದಲ್ಲಿ ಪ್ರಮಾಣವಚನ ಬೋಧಿಸಿದರು.

ತೆಲಂಗಾಣ ಸರ್ಕಾರದ ಏಕೈಕ ಮುಸ್ಲಿಂ ಸಚಿವ ಅಜರುದ್ದೀನ್. ಇವರ ಸೇರ್ಪಡೆಯೊಂದಿಗೆ ರೆಡ್ಡಿ ಸಂಪುಟದ ಸದಸ್ಯ ಬಲ 16ಕ್ಕೆ ಏರಿತು. ಇನ್ನೂ ಎರಡು ಸಚಿವ ಸ್ಥಾನ ಖಾಲಿಯಿವೆ.

ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ಬಿಆರ್ಎಸ್ ಶಾಸಕ ಮಾಗಂಟಿ ಗೋಪಿನಾಥ್ ಅವರು ಕಳೆದ ಜೂನ್ನಲ್ಲಿ ಮೃತಪಟ್ಟಿದ್ದರಿಂದ, ಕ್ಷೇತ್ರದಲ್ಲಿ ಇದೀಗ ಉಪಚುನಾವಣೆ ನಡೆದಿದೆ. ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು
.ತೆಲಂಗಾಣ: ಸಂಪುಟಕ್ಕೆ ಅಜರುದ್ದೀನ್ ಸೇರ್ಪಡೆ ಸಾಧ್ಯತೆ.ಅಜರುದ್ದೀನ್ ಪುತ್ರನ ರಾಜಕೀಯ ಪ್ರವೇಶ: ರಾಹುಲ್ ಗಾಂಧಿ ಸ್ಫೂರ್ತಿ ಎಂದು ಗುಣಗಾನ.
‘ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಎಐಸಿಸಿಯು, ಮುಸ್ಲಿಂ ಮತದಾರರ ಮನವೊಲಿಕೆಗಾಗಿಯೇ ಅಜರುದ್ದೀನ್ ಅವರನ್ನು ಸಚಿವರನ್ನಾಗಿಸಿದೆ’ ಎಂದು ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅಜರುದ್ದೀನ್ ಅವರನ್ನು ತೆಲಂಗಾಣ ಸರ್ಕಾರವು ಆಗಸ್ಟ್ ಕೊನೆ ವಾರದಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ (ಎಂಎಲ್ಸಿ) ನಾಮನಿರ್ದೇಶನ ಮಾಡಿದೆ. ಆದರೆ ರಾಜ್ಯಪಾಲರು ಈ ಶಿಫಾರಸಿಗೆ ಇನ್ನೂ ಅನುಮೋದನೆ ನೀಡಿಲ್ಲ.
.ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ಅವ್ಯವಹಾರ: ED ವಿಚಾರಣೆಗೆ ಅಜರುದ್ದೀನ್ ಗೈರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.