ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆನ್ನೈಯಿಂದ ಮುಂಬೈಗೆ ಹೊರಟಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್‌ ಬೆದರಿಕೆ

Published 19 ಜೂನ್ 2024, 2:25 IST
Last Updated 19 ಜೂನ್ 2024, 2:25 IST
ಅಕ್ಷರ ಗಾತ್ರ

ಮುಂಬೈ: ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೊ ವಿಮಾನವೊಂದಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿತ್ತು. ಆದರೆ ವಿಮಾನವು ಸುರಕ್ಷಿತವಾಗಿ ಮುಂಬೈ ತಲುಪಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ದೆಹಲಿಯ ಖಾಸಗಿ ಏರ್‌ಲೈನ್ಸ್‌ನ ಕಾಲ್‌ ಸೆಂಟರ್‌ವೊಂದಕ್ಕೆ ಬಾಂಬ್‌ ಬೆದರಿಕೆಯ ಸಂದೇಶ ಬಂದಿತ್ತು. ಆದರೆ ವಿಮಾನವು ಸುರಕ್ಷಿತವಾಗಿ ಮುಂಬೈ ತಲುಪಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಸುರಭಿತವಾಗಿದ್ದಾರೆ ಎಂದು ಇಂಡಿಗೊ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಡಿಗೊ ವಿಮಾನ 6E 5149 ಚೆನ್ನೈನಿಂದ ಮುಂಬೈಗೆ ತೆರಳಿತ್ತು. ಈ ಮಧ್ಯೆ ಬೆದರಿಕೆಯ ಕರೆ ಬಂದ ಬಳಿಕವೂ ವಿಮಾನವು ನಿನ್ನೆ ತಡರಾತ್ರಿ ಸುರಕ್ಷಿತವಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ನಂತರ ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಯಿತು. ಭದ್ರತೆಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಮತ್ತೆ ವಿಮಾನವು ಟರ್ಮಿನಲ್‌ ಪ್ರದೇಶಕ್ಕೆ ವಾಪಾಸ್ಸಾಗುತ್ತದೆ ಎಂದು ಹೇಳಿದೆ.

exhumedyou888@gmail.com ಇ– ಮೇಲ್‌ ಐಡಿಯಿಂದ ಮಧ್ಯಾಹ್ನ 12.40 ಸುಮಾರಿಗೆ ಬೆದರಿಕೆ ಸಂದೇಶವನ್ನು ಸ್ವೀಕರಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಪುನಃ ಪರಿಶೀಲಿಸಲಾಯಿತು. ವಾರಾಣಸಿ, ಚೆನ್ನೈ, ಪಟ್ನಾ, ನಾಗ್ಪುರ, ಜೈಪುರ, ವಡೋದರಾ, ಕೊಯಮತ್ತೂರು ಮತ್ತು ಜಬಲ್‌ಪುರ ವಿಮಾನ ನಿಲ್ದಾಣಗಳು ಬೆದರಿಕೆಯ ಸಂದೇಶಗಳನ್ನು ಸ್ವೀಕರಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT