ಲಖನೌ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) 100 ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಸಂಘಟನೆಯಾಗಿ ವಿಕಸನಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಲಖನೌದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘100 ವರ್ಷಗಳ ಹಿಂದೆ ಕೇವಲ ಐದು ಅಥವಾ ಏಳು ಸದಸ್ಯರ ಮೂಲಕ ಸಣ್ಣ ಕೋಣೆಯಲ್ಲಿ ಆರ್ಎಸ್ಎಸ್ ಸಂಘಟನೆ ಸ್ಥಾಪನೆಯಾಯಿತು. ಈಗ ಅದು ವಿಶ್ವದ ಅತಿದೊಡ್ಡ ಸಂಘಟನೆಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ’ ಎಂದು ತಿಳಿಸಿದ್ದಾರೆ.

‘ಭಾರತೀಯ ಜನತಾ ಪಕ್ಷವು (ಬಿಜೆಪಿ) ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವುದು ದೈವಿಕ ಆಶೀರ್ವಾದ ಎಂದು ಪ್ರತಿಪಾದಿಸಿದ ಸಿಂಗ್, ಪಕ್ಷದ ಏಳಿಗೆಗಾಗಿ ಅನೇಕರು ಋಷಿಗಳು ಮತ್ತು ತಪಸ್ವಿಗಳಂತೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ’ ಎಂದು ನುಡಿದಿದ್ದಾರೆ.

‘ದೇಶದ ಪ್ರಗತಿ ವಿಚಾರಕ್ಕೆ ಬರುವುದಾದರೇ 2014ರಲ್ಲಿ ನಾವು 11ನೇ ಸ್ಥಾನದಲ್ಲಿದ್ದೆವು. ಆದರೆ, ಇಂದು ಪರಿಸ್ಥಿತಿ ಬದಲಾಗಿದ್ದು, ಪ್ರಧಾನಿ ಮೋದಿ ನಾಯಕತ್ವದಲ್ಲಿ ನಾವು ನಾಲ್ಕನೇ ಸ್ಥಾನಕ್ಕೆ ಏರಿದ್ದೇವೆ. ಆರ್ಥಿಕ ತಜ್ಞರು ಎರಡು ಮೂರು ವರ್ಷಗಳಲ್ಲಿ ನಾವು ಮೂರನೇ ಸ್ಥಾನವನ್ನು ತಲುಪುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ’ ಎಂದೂ ಸಿಂಗ್ ವಿವರಿಸಿದ್ದಾರೆ.

‘ಪ್ರತಿಯೊಂದು ಸಂಸ್ಥೆಗೆ ಒಂದು ವ್ಯವಸ್ಥೆ ಇದೆ ಮತ್ತು ವೈಯಕ್ತಿಕ ಸಾಮರ್ಥ್ಯಗಳಿಗೆ ಅನುಗುಣವಾಗಿ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ಪ್ರತಿಯೊಬ್ಬರ ಜವಾಬ್ದಾರಿಗಳು ವಿಭಿನ್ನವಾಗಿರುತ್ತವೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ನಂಬರ್ ಒನ್ ಆಗಿರಬಹುದು’ ಎಂದು ಅವರು ಉಲ್ಲೇಖಿಸಿದ್ದಾರೆ.

‘ಪ್ರತಿಯೊಬ್ಬರೂ ಹೇಗೆ ನಂಬರ್ ಒನ್ ಆಗಬಹುದು ಎಂದು ನೀವು ಹೇಳುತ್ತೀರಿ? ಯಾರು ಎಲ್ಲಿಗೆ ತಲುಪುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಇದು ಒಂದು ವ್ಯವಸ್ಥೆ. ಆದ್ದರಿಂದ, ಯಾರೂ ಬೇರೆಯವರಿಗಿಂತ ಚಿಕ್ಕವರಲ್ಲ ಅಥವಾ ದೊಡ್ಡವರಲ್ಲ’ ಎಂದು ಸಿಂಗ್ ಹೇಳಿದ್ದಾರೆ.
.ಪಾಕ್ನ ಪ್ರತಿ ಮೂಲೆಯೂ ಬ್ರಹ್ಮೋಸ್ ಕ್ಷಿಪಣಿ ವ್ಯಾಪ್ತಿಯಲ್ಲಿದೆ: ರಾಜನಾಥ್ ಸಿಂಗ್.ಯುದ್ಧ ಆರಂಭಿಸುವುದು 'ಆಪರೇಷನ್ ಸಿಂಧೂರ'ದ ಉದ್ದೇಶವಾಗಿರಲಿಲ್ಲ: ರಾಜನಾಥ್ ಸಿಂಗ್.ದೀರ್ಘ ಸಂಘರ್ಷಗಳಿಗೆ ಸಶಸ್ತ್ರ ಪಡೆಗಳು ಸಿದ್ಧವಾಗಿರಬೇಕು: ರಾಜನಾಥ್ ಸಿಂಗ್ .ಆಪರೇಷನ್ ಸಿಂಧೂರ ಮುಗಿದಿಲ್ಲ.. ಏನಾಯಿತು ಎಂಬುದು ಕೇವಲ ಟ್ರೇಲರ್: ರಾಜನಾಥ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.