ನವದೆಹಲಿ:'ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು' ಎಂಬ ಸ್ಥಿತಿ ರಾಜ್ಯ ಮೈತ್ರಿಕೂಟದ ಜೆಡಿಎಸ್–ಕಾಂಗ್ರೆಸ್‌ನಲ್ಲಿದೆ. ಅವರವರೇ ಕಚ್ಚಾಡಿ ಸರ್ಕಾರ ಬೀಳಲಿದೆ. ಚಳಿಗಾಲದ ಅಧಿವೇಶನಕ್ಕೆ ಮೈತ್ರಿ ಕೂಟದ ಶಾಸಕರು ಅನೇಕರು ಭಾಗವಹಿಸುವುದಿಲ್ಲ’ ಎಂದುಕೇಂದ್ರದ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಧಮಾಕಾ ಆಗಲಿದೆ’ ಎಂಬ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಹೇಳಿಕೆಗೆ ಪುಷ್ಟಿ ನೀಡಿದರು.

ತೋಳ ಬಂತು ತೋಳ ಎಂಬ ಅಪಪ್ರಚಾರವನ್ನು ಬಿಜೆಪಿ ಮಾಡುತ್ತಿಲ್ಲ. ಬೆಳಗಾವಿ ಜಾರಕೊಹೊಳಿ ಗುಂಪಿನ ತೋಳಗಳು, ಚಿಕ್ಕಬಳ್ಳಾಪುರದ ಸುಧಾಕರ ಗುಂಪಿನ ತೋಳಗಳು ಈಗಾಗಲೇ ಗುಹೆಯಿಂದ ಹೊರಬರುತ್ತಿವೆ. ಅವರಾಗಿ ಅವರೇ ಕಚ್ಚಾಡಿ ಸರ್ಕಾರ ಬೀಳಲಿದೆ. ಸರ್ಕಾರ ಬಿದ್ದರೆ ಬಿಜೆಪಿಯು ಕೆಲವರ ಬೆಂಬಲ ಪಡೆದು ಸರ್ಕಾರ ರಚಿಸಲಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.