ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಗಪುರ: ಭಾರತೀಯ ಮೂಲದ ಮಾಜಿ ಸಚಿವ ದೋಷಿ

Published : 24 ಸೆಪ್ಟೆಂಬರ್ 2024, 14:54 IST
Last Updated : 24 ಸೆಪ್ಟೆಂಬರ್ 2024, 14:54 IST
ಫಾಲೋ ಮಾಡಿ
Comments

ಸಿಂಗಪುರ: ಅಕ್ರಮವಾಗಿ ಉಡುಗೊರೆ ಪಡೆದ ಮತ್ತು ನ್ಯಾಯಿಕ ಪ್ರಕ್ರಿಯೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ, ಸಿಂಗಪುರದ ಮಾಜಿ ಸಾರಿಗೆ ಸಚಿವ ಎಸ್‌.ಈಶ್ವರನ್‌ (62) ಅವರು ದೋಷಿ ಎಂದು ಇಲ್ಲಿನ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

‘ಇಬ್ಬರು ಸ್ಥಳೀಯ ಉದ್ಯಮಿಗಳಿಂದ ಉಡುಗೊರೆಗಳನ್ನು ಪಡೆದ ಸಂಬಂಧದ ನಾಲ್ಕು ಆರೋಪಗಳು ಮತ್ತು ನ್ಯಾಯಿಕ ಪ್ರಕ್ರಿಯೆಗೆ ಅಡ್ಡಿಪಡಿಸಿದ ಮತ್ತೊಂದು ಆರೋಪ ಸಾಬೀತಾಗಿದೆ’ ಎಂದು ಅಟಾರ್ನಿ ಜನರಲ್ ಕಚೇರಿಯ ಹೇಳಿಕೆ ತಿಳಿಸಿದೆ.

ಅಕ್ರಮವಾಗಿ ಉಡುಗೊರೆ ಪಡೆದ ಸುಮಾರು 35 ಆರೋಪಗಳು ಇವರ ವಿರುದ್ಧ ಕೇಳಿಬಂದಿದ್ದವು. ಶಿಕ್ಷೆ ಪ್ರಕಟಿಸುವ ದಿನಾಂಕವನ್ನು ಅಟಾರ್ನಿ ಜನರಲ್ ಕಚೇರಿಯು ಘೋಷಿಸಿಲ್ಲ. ಆದರೆ, ಅಕ್ಟೋಬರ್ 3ರಂದು ಶಿಕ್ಷೆ ಪ್ರಕಟವಾಗಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈಶ್ವರನ್‌ ವಿರುದ್ಧದ ಈ ಎಲ್ಲ ಆರೋಪಗಳಿಗೆ ಆರರಿಂದ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪ್ರತಿವಾದಿ ವಕೀಲರು, ಎಂಟು ವಾರಗಳಿಗಿಂತ ಹೆಚ್ಚು ಅವಧಿಯ ಶಿಕ್ಷೆ ಬೇಡವೆಂದು ಮನವಿ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. 

₹ 2.50 ಕೋಟಿಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಪಡೆದ ಪ್ರಕರಣವೂ ಸೇರಿದಂತೆ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಆರಂಭವಾದ ಬೆನ್ನಲ್ಲೇ ಇದೇ ವರ್ಷದ ಜನವರಿಯಲ್ಲಿ ಈಶ್ವರನ್‌ ಅವರು ಸಚಿವ ಸ್ಥಾನ ತ್ಯಜಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT