ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ ಸುದ್ದಿಗಳು: ಅಕ್ಟೋಬರ್ 15 ಭಾನುವಾರ 2023

Published 15 ಅಕ್ಟೋಬರ್ 2023, 13:28 IST
Last Updated 15 ಅಕ್ಟೋಬರ್ 2023, 13:28 IST
ಅಕ್ಷರ ಗಾತ್ರ
Introduction

ಅಮೆರಿಕದಲ್ಲಿ 19 ಅಡಿ ಎತ್ತರದ ಡಾ. ಬಿ.ಆರ್‌ ಅಂಬೇಡ್ಕರ್‌ ಪ್ರತಿಮೆ ಅನಾವರಣ, Mysuru Dasara 2023: ಬರಗಾಲದ ನಡುವೆ ನಾಡಹಬ್ಬಕ್ಕೆ ಹಂಸಲೇಖ ಚಾಲನೆ, ಮಣಿಪುರ ಬಂದ್‌: ವ್ಯಾಪಾರ -ವಹಿವಾಟು ಸ್ಥಗಿತ, ಜನಜೀವನ ಅಸ್ತವ್ಯಸ್ತ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು.

1

ಅಮೆರಿಕದಲ್ಲಿ 19 ಅಡಿ ಎತ್ತರದ ಡಾ. ಬಿ.ಆರ್‌ ಅಂಬೇಡ್ಕರ್‌ ಪ್ರತಿಮೆ ಅನಾವರಣ

ಅಮೆರಿಕದ ಮೇರಿಲ್ಯಾಂಡ್ ಉಪನಗರದಲ್ಲಿ ಭಾರತದ ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಯನ್ನು ಇಂದು (ಭಾನುವಾರ) ಉದ್ಘಾಟಿಸಲಾಗಿದೆ. ಈ ಪ್ರತಿಮೆ ವಿದೇಶದಲ್ಲಿ ಅನಾವರಣಗೊಳಿಸಲಾದ ಅಂಬೇಡ್ಕರ್‌ ಅವರ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಂಪೂರ್ಣ ಸುದ್ದಿ ಓದಿ

2

Mysuru Dasara 2023: ಬರಗಾಲದ ನಡುವೆ ನಾಡಹಬ್ಬಕ್ಕೆ ಹಂಸಲೇಖ ಚಾಲನೆ

ನಾಡನ್ನು ಆವರಿಸಿದ ಬರಗಾಲ ಮತ್ತು ಕಾವೇರಿ ಹೋರಾಟದ ನಡುವೆಯೇ, ನಗರದ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಉದ್ಘಾಟನೆಗೊಂಡ ಸಂಭ್ರಮದ ದಸರಾ ಉತ್ಸವಕ್ಕೆ, ಕನ್ನಡ ಮತ್ತು ಕರ್ನಾಟಕದ ಅಭಿವೃದ್ಧಿಯ ಆಶಯ ಮುನ್ನುಡಿ ಬರೆಯಿತು.

ಸಂಪೂರ್ಣ ಸುದ್ದಿ ಓದಿ

3

Telangana Election: ಪ್ರಣಾಳಿಕೆ ಬಿಡುಗಡೆ ಮಾಡಿದ KCR, ಭರವಸೆಗಳ ಪಟ್ಟಿ ಇಲ್ಲಿದೆ

ತೆಲಂಗಾಣದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಅರ್ಹ ಕುಟುಂಬಗಳಿಗೆ ₹400ರಂತೆ ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ಸಂಪೂರ್ಣ ಸುದ್ದಿ ಓದಿ

4

ಕೇರಳದಲ್ಲಿ ಭಾರಿ ಮಳೆ: 4 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಕೇರಳ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಮತ್ತು ಪ್ರವಾಹದ ಕುರಿತು ವರದಿಯಾಗಿದೆ. ತಿರುವನಂತಪುರ ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಸಂಪೂರ್ಣ ಸುದ್ದಿ ಓದಿ

5

ಆಪರೇಷನ್ ಅಜಯ್‌: ಇಸ್ರೇಲ್‌ನಿಂದ 4ನೇ ವಿಮಾನದಲ್ಲಿ ದೆಹಲಿಗೆ ಬಂದ 274 ಭಾರತೀಯರು

ಆಪರೇಷನ್ ಅಜಯ್‌ ಅಡಿಯಲ್ಲಿ ಯುದ್ಧ ಪೀಡಿತ ಇಸ್ರೇಲ್‌ನಿಂದ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ ದೆಹಲಿ ತಲುಪಿದೆ. ಅವರನ್ನು ಕೇಂದ್ರ ಸಚಿವ ವಿ.ಕೆ ಸಿಂಗ್ ಬರಮಾಡಿಕೊಂಡರು.

ಸಂಪೂರ್ಣ ಸುದ್ದಿ ಓದಿ

6

ಮಣಿಪುರ ಬಂದ್‌: ವ್ಯಾಪಾರ -ವಹಿವಾಟು ಸ್ಥಗಿತ, ಜನಜೀವನ ಅಸ್ತವ್ಯಸ್ತ

ಮಣಿಪುರವನ್ನು ಭಾರತದೊಂದಿಗೆ ವಿಲೀನಗೊಳಿಸಿದ್ದರ ವಿರುದ್ಧ ಹಲವು ಉಗ್ರ ಸಂಘಟನೆಗಳು ಭಾನುವಾರ ಬಂದ್‌ಗೆ ಕರೆ ನೀಡಿದ್ದು, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಸಂಪೂರ್ಣ ಸುದ್ದಿ ಓದಿ

7

ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಸಂಪರ್ಕದಲ್ಲಿ; ಭೋಸರಾಜು

ಎನ್.ಎಸ್. ಭೋಸರಾಜು

ಎನ್.ಎಸ್. ಭೋಸರಾಜು

ರೇಣುಕಾಚಾರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್.ಭೋಸರಾಜು ತಿಳಿಸಿದರು.

ಸಂಪೂರ್ಣ ಸುದ್ದಿ ಓದಿ

8

ಪ್ರಧಾನಿ ಮೋದಿ ಅವಹೇಳನ ಪ್ರಕರಣ: ಪವನ್‌ ಖೇರಾ ಅರ್ಜಿ ವಿಚಾರಣೆ ನಾಳೆ

ತಮ್ಮ ಮೇಲೆ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ರದ್ದತಿಗೆ ನಿರಾಕರಿಸಿದ ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.

ಸಂಪೂರ್ಣ ಸುದ್ದಿ ಓದಿ

9

IND vs PAK: ಬಾಬರ್‌ಗೆ ಜೆರ್ಸಿ ಉಡುಗೊರೆ ನೀಡಿದ ಕೊಹ್ಲಿ; ವಾಸೀಂ ಅಕ್ರಮ್ ಗರಂ

ಪಾಕಿಸ್ತಾನ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯದ ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಆಜಂ ಅವರನ್ನು ಭೇಟಿ ಮಾಡಿರುವ ವಿರಾಟ್ ಕೊಹ್ಲಿ, ಪಾಕ್ ನಾಯಕನಿಗೆ ತಾವು ಸಹಿ ಮಾಡಿರುವ ಜೆರ್ಸಿ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂಪೂರ್ಣ ಸುದ್ದಿ ಓದಿ

10

ICC World Cup 2023 AUS vs SL: ಮೊದಲ ಗೆಲುವಿನ ತವಕದಲ್ಲಿ ಎರಡು ತಂಡಗಳು!

ಈ ಸಲದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ಪರದಾಡುತ್ತಿರುವ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಸೋಮವಾರ ಮುಖಾಮುಖಿಯಾಗಲಿವೆ.

ಸಂಪೂರ್ಣ ಸುದ್ದಿ ಓದಿ