ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರಿಯಾನಿಗಾಗಿ ಬಾಲಕನನ್ನು 55 ಬಾರಿ ಇರಿದು ಕೊಂದು, ನರ್ತಿಸಿದ ಮತ್ತೊಬ್ಬ ಬಾಲಕ

Published 23 ನವೆಂಬರ್ 2023, 10:54 IST
Last Updated 23 ನವೆಂಬರ್ 2023, 10:54 IST
ಅಕ್ಷರ ಗಾತ್ರ

ನವದೆಹಲಿ: ತನಗೆ ಬಿರಿಯಾನಿ ಕೊಡಿಸಲಿಲ್ಲ ಎಂಬ ನೆಪವೊಡ್ಡಿ 16 ವರ್ಷದ ಬಾಲಕನೊಬ್ಬ, 17 ವರ್ಷದ ಬಾಲಕನನ್ನು 55 ಬಾರಿ ಇರಿದು, ಕತ್ತು ಸೀಳಿ ಕೊಲೆಗೈದಿದ್ದಾನೆ. ಹತ್ಯೆಯ ನಂತರ ನರ್ತಿಸಿ ಪೈಶಾಚಿಕತೆ ಮೆರೆದಿದ್ದಾನೆ.

ಪೂರ್ವ ದಹಲಿಯ ವೆಲ್‌ಕಮ್ ಕಾಲೊನಿಯಲ್ಲಿ ನಡೆದ ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದು ಈಗ ಎಲ್ಲೆಡೆ ಹರಿದಾಡುತ್ತಿದೆ.

ಜನಾ ಮಜ್ದೂರ್‌ ಕಾಲೊನಿಯಲ್ಲಿ ನಡೆದ ಈ ಘಟನೆಯ 2.23 ನಿಮಿಷಗಳ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಎದುರು ತಪ್ಪೊಪ್ಪಿಕೊಂಡಿರುವ ಆರೋಪಿ, ತಾನು ಬಿರಿಯಾನಿ ತಿನ್ನಲು ಹಣ ಕೇಳಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿರಿಯಾನಿಗೆ ಹಣ ನೀಡಲು ನಿರಾಕರಿಸಿದ ಬಾಲಕನ ಮೇಲೆ ಹಲ್ಲೆ ನಡೆಸಿದ ನಂತರ ಆತ ಮೂರ್ಚೆ ಹೋದ. ಆ ನಂತರ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಮುಖ, ಕುತ್ತಿಗೆ, ಬೆನ್ನು, ಕಣ್ಣು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ 55 ಬಾರಿ ಇರಿದಿದ್ದಾನೆ. ಇಷ್ಟು ಸಾಲದು ಎಂಬಂತೆ ಮೃತದೇಹವನ್ನು ರಸ್ತೆ ಪಕ್ಕಕ್ಕೆ ಎಳೆದೊಯ್ದಿದ್ದಾನೆ. ಗಲಾಟೆ ಕೇಳಿ ಬಾಗಿಲು ತೆರೆದು ನೋಡಿದ ಸ್ಥಳೀಯರಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಕೃತ್ಯದ ಸಂದರ್ಭದಲ್ಲಿ ಆರೋಪಿ ಮದ್ಯ ಸೇವಿಸಿದ್ದ’ ಎಂದು ಡಿಸಿಪಿ ಜಾಯ್ ಟಿರ್ಕೆ ಹೇಳಿದ್ದಾರೆ.

‘ಕೃತ್ಯದ ನಂತರ ಮೃತ ಬಾಲಕನ ತಲೆಕೂದಲು ಹಿಡಿದು ಎಳೆದು ಅದೇ ಜಾಗಕ್ಕೆ ತಂದು ಆರೋಪಿ ಹಾಕಿದ್ದಾನೆ. ಆತನ ಜೇಬಿನಲ್ಲಿದ್ದ ₹350 ತೆಗೆದುಕೊಂಡು ಹೋಗಿದ್ದಾನೆ. ಬಂಧಿತ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತನಿಂದ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT