ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಸೋನಿಯಾ ಅಮ್ಮಾ.. ತೆಲಂಗಾಣ ಕಾಂಗ್ರೆಸ್ ಭಾವನಾತ್ಮಕ ಟ್ವೀಟ್

ತೆಲಂಗಾಣದಲ್ಲಿ 10 ವರ್ಷ ಅಧಿಕಾರದಿಂದ ದೂರ ಇದ್ದ ಕಾಂಗ್ರೆಸ್
Published 3 ಡಿಸೆಂಬರ್ 2023, 11:08 IST
Last Updated 3 ಡಿಸೆಂಬರ್ 2023, 11:08 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, 119 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 65 ರಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡು ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಧಾಪುಗಾಲು ಹಾಕುತ್ತಿದೆ. ಬಿಆರ್‌ಎಸ್ ತೀವ್ರ ಹಿನ್ನಡೆ ಅನುಭವಿಸಿದೆ. 35 ರಲ್ಲಿ ವಿಜಯ ಸಾಧಿಸುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿ 9 ಸ್ಥಾನಗಳಲ್ಲಿ ಮುನ್ನಡೆ ಇದೆ.

ಇನ್ನು ಈ ಅಭೂತಪೂರ್ವ ಜಯದ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ತೆಲಂಗಾಣ ಕಾಂಗ್ರೆಸ್, ‘ನಾವು ತೆಲಂಗಾಣ ಗೆದ್ದೆವು.. ಜೈ ತೆಲಂಗಾಣ, ಜೈ ಕಾಂಗ್ರೆಸ್, ಜೈ ಸೋನಿಯಾ ಅಮ್ಮ’ ಎಂದು ಟ್ವೀಟ್ ಮಾಡಿದೆ.

ತೆಲಂಗಾಣ ರಾಜ್ಯ ರಚನೆ ಆದ ಮೇಲೆ ಹಾಗೂ ತೆಲಂಗಾಣ ಉದಯಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸಹಾಯ ಧಿಕ್ಕರಿಸಿ ಪ್ರತ್ಯೇಕವಾಗಿ ಟಿಆರ್‌ಎಸ್ ಹೆಸರಲ್ಲಿ ಕೆಸಿಆರ್ ಅವರು ಕಾಂಗ್ರೆಸ್ ಸೋಲಿಸಿ ಸಿಎಂ ಆದರು. ಅಲ್ಲಿಂದ ಎರಡು ಅವಧಿ ಕಾಂಗ್ರೆಸ್ ಅಧಿಕಾರ ವಂಚಿತವಾಗಿತ್ತು. ಇದೀಗ ಮರಳಿ ಅಧಿಕಾರ ಪಡೆದಿದೆ.

ಪ್ರಚಾರ ಕಾರ್ಯದಲ್ಲಿ ಸಾಕಷ್ಟು ಶ್ರಮ ಹಾಕಿದ್ದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಹೈದರಾಬಾದ್‌ನಲ್ಲೇ ಬೀಡು ಬಿಟ್ಟಿದ್ದು, ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.

ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಅವರು ತೆಲಂಗಾಣ ಸಿಎಂ ಅಭ್ಯರ್ಥಿಗಳ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT