ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Ram Mandir | ಗರ್ಭಗುಡಿಯೊಳಗೆ ರಾಮನ ವಿಗ್ರಹ; ಇಂದು ಪ್ರತಿಷ್ಠಾಪನೆ

Published 18 ಜನವರಿ 2024, 2:44 IST
Last Updated 18 ಜನವರಿ 2024, 2:44 IST
ಅಕ್ಷರ ಗಾತ್ರ

ಅಯೋಧ್ಯೆ: ಇಲ್ಲಿನ ರಾಮ ಮಂದಿರದ ಗರ್ಭಗುಡಿಯೊಳಗೆ ಶ್ರೀರಾಮನ ಮೂರ್ತಿಯನ್ನು ತರಲಾಯಿತು. ಬುಧವಾರ ರಾತ್ರಿ ಕ್ರೇನ್ ಮೂಲಕ ಮೂರ್ತಿಯನ್ನು ಗರ್ಭಗುಡಿಯೊಳಗೆ ತರಲಾಯಿತು.

ಈ ವೇಳೆ ವಿಶೇಷ ಪೂಜೆಗಳು ಜರುಗಿದವು ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್ ಅವರು ಕೆತ್ತಿರುವ ಕಪ್ಪು ಶಿಲೆಯ ಮೂರ್ತಿಯನ್ನು ಗರ್ಭಗುಡಿಯೊಳಗೆ ತರಲಾಯಿತು. 150–200 ಕೆ.ಜಿ ತೂಗುವ ಈ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿದ ಟ್ರಕ್‌ ಮೂಲಕ ಮೆರವಣಿಗೆಯಲ್ಲಿ ದೇಗುಲದ ಆವರಣಕ್ಕೆ ತರಲಾಯಿತು. ದಾರಿ ಮಧ್ಯೆ ಹನುಮಾನ್‌ಗಡಿಯಲ್ಲಿ ಕೆಲ ಹೊತ್ತು ತಂಗಿ, ಮೆರವಣಿಗೆ ಮುಂದುವರಿಯಿತು.

ಇಂದು (ಗುರುವಾರ) ಮೂರ್ತಿಯ ಪ್ರತಿಷ್ಠಾಪನೆ ನಡೆಯುವ ಸಂಭವವಿದೆ ಎಂದು ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

ಜ.22 ರಂದು ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಜ.23 ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

ಜ.22 ರಂದು ಮಧ್ಯಾಹ್ನ 12.20ರ ವೇಳೆಗೆ ಪ್ರಾಣ ಪ್ರತಿಷ್ಠಾಪನೆಯ ವಿಧಿ ವಿಧಾನಗಳು ಪ್ರಾರಂಭವಾಗಲಿದ್ದು, ಸುಮಾರು 1ಗಂಟೆವರೆಗೂ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT