ಭಾನುವಾರ, 1 ಅಕ್ಟೋಬರ್ 2023

ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಸೆಪ್ಟೆಂಬರ್‌ 12, ಮಂಗಳವಾರ 2023

Published 12 ಸೆಪ್ಟೆಂಬರ್ 2023, 13:46 IST
Last Updated 12 ಸೆಪ್ಟೆಂಬರ್ 2023, 13:46 IST
ಅಕ್ಷರ ಗಾತ್ರ
Introduction

ಕಾವೇರಿ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸಮಿತಿ ಶಿಫಾರಸು,  ಕೇರಳದಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್‌ ಪತ್ತೆ, Covid-19: ಅತ್ಯಂತ ಅಪಾಯಕಾರಿ 28 ಹೊಸ ತಳಿ ಪತ್ತೆ ಮಾಡಿದ ವಿಜ್ಞಾನಿಗಳು ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.

1

ಕಾವೇರಿ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸಮಿತಿ ಶಿಫಾರಸು

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ಕರ್ನಾಟಕವು 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ಕಾವೇರಿ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸಮಿತಿ ಶಿಫಾರಸು

2

NiPah Alert: ಕೇರಳದಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್‌ ಪತ್ತೆ

ನಿಫಾ ವೈರಸ್‌ (ಪ್ರಾತಿನಿಧಿಕ ಚಿತ್ರ)

ನಿಫಾ ವೈರಸ್‌ (ಪ್ರಾತಿನಿಧಿಕ ಚಿತ್ರ)

ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್‌ ಇರುವುದು ದೃಢಪಟ್ಟಿದೆ.

ಈ ಸುದ್ದಿಯನ್ನು ಪೂರ್ಣ ಓದಿ: NiPah Alert: ಕೇರಳದಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್‌ ಪತ್ತೆ

3

ಪಶ್ಚಿಮ ಬಂಗಾಳ: ಕೇಂದ್ರ ಸಚಿವರನ್ನೇ ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು

ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಸುಭಾಸ್ ಸರ್ಕಾರ್ ಅವರನ್ನೇ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಕೂಡಿ ಹಾಕಿದ ಘಟನೆ ಮಂಗಳವಾರ ನಡೆದಿದೆ

ಈ ಸುದ್ದಿಯನ್ನು ಪೂರ್ಣ ಓದಿ: ಪಶ್ಚಿಮ ಬಂಗಾಳ: ಕೇಂದ್ರ ಸಚಿವರನ್ನೇ ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು

4

ಕ್ಲೀನ್ ಬೌಲ್ಡ್ ಆದ ಬಾಬರ್‌ ಅಜಂ; ರಸ್ತೆ ಸುರಕ್ಷತೆ ಪಾಠ ಹೇಳಿದ ಹು–ಧಾ ಪೊಲೀಸ್

ಪಾಕ್‌ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಾಕಿದ ಇನ್‌ಸ್ವಿಂಗ್‌ ಎಸೆತವನ್ನು ಸರಿಯಾಗಿ ಗುರುತಿಸಲು ವಿಫಲವಾದ ಬಾಬರ್‌ ಅಜಂ ಕ್ಲೀನ್ ಬೌಲ್ಡ್‌ ಆದರು.

ಈ ಸುದ್ದಿಯನ್ನು ಪೂರ್ಣ ಓದಿ: ಕ್ಲೀನ್ ಬೌಲ್ಡ್ ಆದ ಬಾಬರ್‌ ಅಜಂ; ರಸ್ತೆ ಸುರಕ್ಷತೆ ಪಾಠ ಹೇಳಿದ ಹು–ಧಾ ಪೊಲೀಸ್

5

ಭಾಷೆಯನ್ನು ಭ್ರಷ್ಟಗೊಳಿಸುವ ಜನರೇ ಹೆಚ್ಚಿದ್ದಾರೆ: ‌ಬರಗೂರು ರಾಮಚಂದ್ರಪ್ಪ

‘ಕನ್ನಡ ಭಾಷೆ ಕುರಿತು ಜನರಲ್ಲಿ ತಪ್ಪು ಗ್ರಹಿಕೆ ಇದೆ. ಕನ್ನಡ ನಾಶವಾಗಲಿದೆ ಎಂಬುದಾಗಿ ತಪ್ಪಾಗಿ ತಿಳಿದುಕೊಂಡಿದ್ದಾರೆ. ನಾನು 1969–70ರಲ್ಲಿ ಎಂ.ಎ ಮಾಡಲು ಬಂದಾಗ ಬೆಂಗಳೂರನ್ನು ತಮಿಳು ಭಾಷೆ ಆವರಿಸಿಕೊಳ್ಳಲಿದೆ ಎನ್ನುತ್ತಿದ್ದರು. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರ ಹೇಳಿದರು.

ಈ ಸುದ್ದಿಯನ್ನು ಪೂರ್ಣ ಓದಿ: ಭಾಷೆಯನ್ನು ಭ್ರಷ್ಟಗೊಳಿಸುವ ಜನರೇ ಹೆಚ್ಚಿದ್ದಾರೆ: ‌ಬರಗೂರು ರಾಮಚಂದ್ರಪ್ಪ

6

ಇನ್ಮುಂದೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲ: ಯತ್ನಾಳ

ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ

‘ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಹಗಲಲ್ಲ ಪಾಲ್ಗೊಳ್ಳಲು ಆಗದು’ ಎಂದು ಈ ಹಿಂದೆ ಹೋರಾಟದ ಮುಂಚೂಣಿಯಲ್ಲಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮದಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಪೂರ್ಣ ಓದಿ: ಇನ್ಮುಂದೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲ: ಯತ್ನಾಳ

7

Covid-19: ಅತ್ಯಂತ ಅಪಾಯಕಾರಿ 28 ಹೊಸ ತಳಿ ಪತ್ತೆ ಮಾಡಿದ ವಿಜ್ಞಾನಿಗಳು

ಕೋವಿಡ್‌–19ರ ಹೊಸ 51 ತಳಿಯನ್ನು ಪತ್ತೆ ಮಾಡಿರುವ ಅಂತರಾಷ್ಟ್ರೀಯ ಸಂಶೋಧನಾ ಒಕ್ಕೂಟವು, ಅವುಗಳಲ್ಲಿ 28 ಅತ್ಯಂತ ಅಪಾಯಕಾರಿ ಎಂದಿದೆ.

ಈ ಸುದ್ದಿಯನ್ನು ಪೂರ್ಣ ಓದಿ: Covid-19: ಅತ್ಯಂತ ಅಪಾಯಕಾರಿ 28 ಹೊಸ ತಳಿ ಪತ್ತೆ ಮಾಡಿದ ವಿಜ್ಞಾನಿಗಳು

8

ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ: 8 ದೇಶಗಳ 182 ತಜ್ಞರಿಂದ ರಕ್ಷಣೆ!

‌ಟರ್ಕಿಯ ಗುಹೆಯೊಂದರಲ್ಲಿ ಅಪಾಯದಲ್ಲಿ ಸಿಲುಕಿದ್ದ ಅಮೆರಿಕ ಮೂಲದ ಅನ್ವೇಷಕರೊಬ್ಬರನ್ನು 8 ದೇಶಗಳ 182 ಜನರ ರಕ್ಷಣಾ ತಂಡ ರಕ್ಷಿಸಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ: 8 ದೇಶಗಳ 182 ತಜ್ಞರಿಂದ ರಕ್ಷಣೆ!

9

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ; 41,961 ವಿದ್ಯಾರ್ಥಿಗಳು ಪಾಸ್‌

ಕಳೆದ ಆಗಸ್ಟ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಒಟ್ಟು 41,961 (ಶೇ 35.21) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ; 41,961 ವಿದ್ಯಾರ್ಥಿಗಳು ಪಾಸ್‌

10

ಎಮ್ಮೆ ಕದ್ದಿದ್ದ ಆರೋಪಿ 57 ವರ್ಷಗಳ ನಂತರ ಬಂಧನ! ಪೊಲೀಸರಿಗೆ ಬಹುಮಾನ

ಆರೋಪಿ ಗಣಪತಿ ವಿಠ್ಠಲ ವಾಗ್ದಾರೆಯನ್ನು ಮೆಹಕರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ

ಆರೋಪಿ ಗಣಪತಿ ವಿಠ್ಠಲ ವಾಗ್ದಾರೆಯನ್ನು ಮೆಹಕರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ

57 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳವು ಪ್ರಕರಣದ ಆರೋಪಿ ಗಣಪತಿ ವಿಠ್ಠಲ ವಾಗ್ದಾರೆ(77)ಯನ್ನು ಮೆಹಕರ್‌ ಠಾಣೆ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಎಮ್ಮೆ ಕದ್ದಿದ್ದ ಆರೋಪಿ 57 ವರ್ಷಗಳ ನಂತರ ಬಂಧನ! ಪೊಲೀಸರಿಗೆ ಬಹುಮಾನ