ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

‘ಮೋಹನದಾಸ್ ಕರಮಚಂದ ಗಾಂಧಿ ಅವರ ಆತ್ಮಕಥೆಯ ಸಂಪುಟ–2ರ ಬಗ್ಗೆಗಿನ ದಸ್ತಾವೇಜುಗಳು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ 51 ಪೆಟ್ಟಿಗೆಗಳಲ್ಲಿ ಭದ್ರವಾಗಿದ್ದು ಅವುಗಳನ್ನು ಪತ್ತೆಹಚ್ಚಲು ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಪುನರಾವಲೋಕನ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
.ಗಾಂಧಿ ಆತ್ಮಕಥೆ–2ರ ಪತ್ತೆ ಕೋರಿಕೆ: ಅರ್ಜಿ ವಜಾಗೊಳಿಸಿದ ಹೈಕೋರ್ಟ್.
ಐ-ಪ್ಯಾಕ್ ಕಚೇರಿ ಮತ್ತು ಅದರ ನಿರ್ದೇಶಕರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಶ್ಚಿಮ ಬಂಗಾಳದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇಂದು (ಗುರುವಾರ) ನೋಟಿಸ್ ಜಾರಿಗೊಳಿಸಿದೆ.
.I-PAC Raids: ಮಮತಾ ಬ್ಯಾನರ್ಜಿ, ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್.
ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಎಲ್ಲ ಸೇನಾ ಕಮಾಂಡ್ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶದ ಸೇನೆಗೆ ಬಲ ತುಂಬಿದ ಅತ್ಯಾಧುನಿಕ ಕ್ಷಿಪಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
.Indian Army Day 2026: ದೇಶದ ಸೇನೆಗೆ ಬಲ ತುಂಬಿದ ಅತ್ಯಾಧುನಿಕ ಕ್ಷಿಪಣಿಗಳಿವು...
‘ನಮ್ಮ ಸೇನೆ ಭವಿಷ್ಯದ ಯುದ್ಧಗಳಿಗೆ ಸನ್ನದ್ಧಗೊಳ್ಳುತ್ತಿದೆ. ನಾವು ಸ್ವದೇಶಿ ನಿರ್ಮಿತ ಯುದ್ಧ ಸಲಕರಣೆಗಳನ್ನು ಹೊಂದುವುದು ಸದ್ಯದ ಅಗತ್ಯವಾಗಿದೆ. ಇದು ಕಾರ್ಯತಂತ್ರದ ಅನಿವಾರ್ಯತೆಯೂ ಹೌದು’ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಗುರುವಾರ ಹೇಳಿದ್ದಾರೆ.
.ಭವಿಷ್ಯದ ಯುದ್ಧಗಳಿಗೆ ಭಾರತೀಯ ಸೇನೆ ಸನ್ನದ್ಧ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ.
ಬಿಹಾರದ ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ ಅವರು ಜ.12ರಂದು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ರಾಜಮನೆತನದ ಸದಸ್ಯರಿಗೆ ಸಾಂಪ್ರದಾಯಿಕವಾಗಿ ನಡೆಯುವಂತೆಯೇ ಶ್ಯಾಮಾ ಮಾಯಿ ದೇವಾಲಯ ಸಂಕೀರ್ಣದಲ್ಲಿ ಮಹಾರಾಣಿಯವರ ಅಂತ್ಯಕ್ರಿಯೆ ನಡೆದಿದೆ.
.ಭಾರತ–ಚೀನಾ ಯುದ್ಧದ ವೇಳೆ 600KG ಚಿನ್ನ ನೀಡಿದ್ದ ಮಹಾರಾಣಿ ಕಾಮಸುಂದರಿ ದೇವಿ ನಿಧನ.
78ನೇ ಭಾರತೀಯ ಸೇನಾ ದಿನದ ಅಂಗವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದ ಹಾಗೂ ಭಾರತೀಯ ಸೇನೆಯ ಶಕ್ತಿಯನ್ನು ವಿವರಿಸುವ ವಿಡಿಯೊವೊಂದನ್ನು ಸೇನೆ ಬಿಡುಗಡೆ ಮಾಡಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕರ ಮೂಲಸೌಕರ್ಯಗಳನ್ನು ನಾಶಮಾಡಲು ನಡೆಸಲಾದ ಆಪರೇಷನ್ ಸಿಂಧೂರದ ಹೈಲೈಟ್ ಕೂಡ ವಿಡಿಯೊದಲ್ಲಿದೆ.
.ಆಪರೇಷನ್ ಸಿಂಧೂರ, ಸೇನಾ ಕಾರ್ಯಾಚರಣೆಗಳ ವಿಡಿಯೊ ಹಂಚಿಕೊಂಡ ಸೇನೆ.
ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಅವರು ಸಿನಿಮಾ ಪೈರಸಿ ವಿರುದ್ಧ ರಾಜ್ಯಸಭೆಯಲ್ಲಿ ಮಾತನಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಪೈರಸಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
.ಸಿನಿಮಾ ಪೈರಸಿ ವಿರುದ್ಧ ಕ್ರಮದ ಭರವಸೆ ನೀಡಿದ ಕೇಂದ್ರ: ನಟ ಜಗ್ಗೇಶ್ ಧನ್ಯವಾದ.
‘ಸಂಪ್ರದಾಯದ ಉಲ್ಲಂಘನೆಗಾಗಿ ಶಬರಿಮಲೆ ಮುಖ್ಯ ಅರ್ಚಕರನ್ನು ಬಂಧಿಸಿರುವುದಾದರೆ, ಅದಕ್ಕೂ ಮೊದಲು ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಬಂಧಿಸಬೇಕು’ ಎಂದು ಕೇರಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಗುರುವಾರ ಹೇಳಿದರು.
.ಸಂಪ್ರದಾಯದ ಉಲ್ಲಂಘನೆ | ಬಂಧಿಸುವುದಾದರೆ ಪಿಣರಾಯಿ ಬಂಧಿಸಿ: ರಾಜೀವ್ ಚಂದ್ರಶೇಖರ್.
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 75 'ಹೆಚ್ಚಿನ ಅಪಾಯ' ದೇಶಗಳ ವ್ಯಕ್ತಿಗಳಿಗೆ ವಲಸೆ ವೀಸಾ ನೀಡುವುದನ್ನು ಅಮೆರಿಕ ಸ್ಥಗಿತಗೊಳಿಸಿದ್ದು, ಈ ಕ್ರಮವು ಪ್ರವಾಸಿ ಅಥವಾ ಕೆಲಸದ ವೀಸಾಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಬಯಸುವವರ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ.
. ಪಾಕ್ ಸೇರಿ 75 'ಹೈ ರಿಸ್ಕ್' ದೇಶಗಳ ಜನರಿಗೆ ವಲಸೆ ವೀಸಾ ಸ್ಥಗಿತಗೊಳಿಸಿದ ಅಮೆರಿಕ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಇಕ್ಕಟ್ಟಿಗೆ ಸಿಲುಕಿದ್ದು, ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಇಂದಿನ (ಗುರುವಾರ) ಪಂದ್ಯವನ್ನು ಆಟಗಾರರು ಬಹಿಷ್ಕರಿಸಿದ್ದಾರೆ. ಭಾರತದೊಂದಿಗಿನ ಬಿಕ್ಕಟ್ಟು ಮುಂದುವರಿಯುತ್ತಿರುವ ಮಧ್ಯೆಯೇ ನೆರೆಯ ರಾಷ್ಟ್ರದಲ್ಲಿ ಈ ಎಲ್ಲ ಬೆಳವಣಿಗೆಗಳು ಕಂಡುಬಂದಿವೆ.
.BPL ಪಂದ್ಯ ಬಹಿಷ್ಕರಿಸಿದ ಬಾಂಗ್ಲಾದೇಶದ ಕ್ರಿಕೆಟಿಗರು; ನಿರ್ದೇಶಕರಿಗೆ BCB ನೋಟಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.