ಚುಣಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
.ಮತಗಳ್ಳತನವನ್ನು ಮುಚ್ಚಿ ಹಾಕಲು ಎಸ್ಐಆರ್: ರಾಹುಲ್ ಗಾಂಧಿ ಆರೋಪ.
ಬಿಹಾರ ಎಸ್ಐಆರ್ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠದ ಮುಂದೆ ಈ ಅರ್ಜಿಯೂ ಬರಲಿದೆ.

ಬಿಹಾರ ಎಸ್ಐಆರ್ನ ವಿಚಾರಣೆ ಮಂಗಳವಾರ ಮುಂದುವರಿಯಲಿದ್ದು, ಅದರೊಂದಿಗೆ ಈ ಅರ್ಜಿಯನ್ನೂ ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್ ಪರ ವಕೀಲ ವಿನಂತಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಲೋಪ ಇದ್ದಿದ್ದರಿಂದ ಕೋರ್ಟ್ ಅನ್ನು ಸಮೀಪಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

‘ನಮ್ಮ ಪೀಠದಲ್ಲಿಯೇ ವಿಚಾರಣೆ ನಡೆಯಲಿದೆಯೇ ಎನ್ನುವುದನ್ನು ತೀರ್ಮಾನ ಮಾಡುವುದು ಸಿಜೆಐಗೆ ಬಿಟ್ಟಿದ್ದು’ ಎಂದು ಪೀಠ ಹೇಳಿತು. ಬಿಹಾರ ಎಸ್ಐಆರ್ನೊಂದಿಗೆ ಅದೇ ರೀತಿಯ ಹಲವು ಅರ್ಜಿಗಳು ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬರಲಿದೆ ಎಂದು ಕಾಂಗ್ರೆಸ್ ಪರ ವಕೀಲರು ಈ ವೇಳೆ ಕೋರ್ಟ್ನ ಗಮನಕ್ಕೆ ತಂದರು.
.ಎಸ್ಐಆರ್ ನಿಯಮ ಉಲ್ಲಂಘನೆ: ಪಶ್ಚಿಮ ಬಂಗಾಳದ 8 ಬಿಎಲ್ಒಗಳಿಗೆ ಕಾರಣ ಕೇಳಿ ನೋಟಿಸ್.
ಬಿಹಾರ ಎಸ್ಐಆರ್ ಸಂಬಂಧಿಸಿದ ಅರ್ಜಿಗಳೊಂದಿಗೆ ಇದನ್ನೂ ವಿಚಾರಣೆ ಮಾಡಲು ಕೋರ್ಟ್ ಸಮ್ಮತಿಸಿತು.

ಎಡಿಆರ್, ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವುಮನ್ ಸೇರಿ ಹಲವು ಮಂದಿ ಸಲ್ಲಿಸಿದ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.

ತಮಿಳುನಾಡಿನಲ್ಲಿ ಎಸ್ಐಆರ್ ನಡೆಸುವುದನ್ನು ಪ್ರಶ್ನಿಸಿ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಈಗಾಗಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.

(ಬಾರ್ ಆ್ಯಂಡ್ ಬೆಂಚ್ ವರದಿ ಆಧಿರಿಸಿ ಬರೆದ ಸುದ್ದಿ)
.ಎಸ್ಐಆರ್ ವಿರುದ್ಧ ಬೀದಿಗಿಳಿದ ಮಮತಾ ಬ್ಯಾನರ್ಜಿ: 3.8 ಕಿ.ಮೀ ಕಾಲ್ನಡಿಗೆ ಜಾಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.