ಮೆಗಾಸಿಟಿಗಳ ಅರಣ್ಯ ಪಟ್ಟಿಯಲ್ಲಿ ಬೆಂಗಳೂರು
ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಯನ್ನು ಹೊಂದಿರುವ ಆರು ಮೆಗಾಸಿಟಿಗಳ ಅರಣ್ಯ ವ್ಯಾಪ್ತಿಯನ್ನು ವರದಿಯು ಪಟ್ಟಿಮಾಡಿದೆ. ದೆಹಲಿಯು 194 ಚ.ಕಿ.ಮೀ ಅರಣ್ಯಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ (110 ಚ.ಕಿ.ಮೀ), ಬೆಂಗಳೂರು (89 ಚ.ಕಿ.ಮೀ) ಮತ್ತು ಹೈದರಾಬಾದ್ (80 ಚ.ಕಿ.ಮೀ) ಇವೆ. ಕೋಲ್ಕತ್ತ (2 ಚ.ಕಿ.ಮೀ ) ಕಡಿಮೆ ಅರಣ್ಯ ವ್ಯಾಪ್ತಿ ಹೊಂದಿರುವ ನಗರವೆನಿಸಿದೆ. ಕಾಡಿನ ಬೆಂಕಿ ಅವಘಡಗಳಲ್ಲಿ ಹಿಮಾಚಲ ಪ್ರದೇಶ (14 ಪಟ್ಟು) ಮತ್ತು ಉತ್ತರಾಖಂಡ (4 ಪಟ್ಟು) ಹೆಚ್ಚು ಅಪಾಯ ಎದುರಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.