ಚೆನ್ನೈ: ಭಾರತದ ಕರಾವಳಿ ತೀರದ ಜನರನ್ನು ಬೆಂಬಲಿಸುವ ಹೊಸ ಯೋಜನೆಗೆ ವಿಶ್ವ ಬ್ಯಾಂಕ್ ಅನುಮೋದನೆ ನೀಡಿದೆ. ಇದು ಪರಿಸರ ವ್ಯವಸ್ಥೆಯ ರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆಗೊಳಿಸುವುದು ಹಾಗೂ ತಮಿಳುನಾಡು ಮತ್ತು ಕರ್ನಾಟಕ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ.
.ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಅಜಯ್ ಬಂಗಾ ನೇಮಕ: ಕಮಲಾ ಹ್ಯಾರಿಸ್ ಅಭಿನಂದನೆ.
ಕರಾವಳಿ ತೀರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ‘ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯನ್ನು ಬಲಪಡಿಸುವ’ (ಶೋರ್) ಯೋಜನೆಯಡಿ 212.64 ಮಿಲಿಯನ್ ಡಾಲರ್ ಖರ್ಚು ಮಾಡಲಿದೆ.

ಭಾರತದಲ್ಲಿ 10 ಸಾವಿರ ಕಿ.ಮೀಟರ್ಗೂ ಅಧಿಕ ಸಮುದ್ರ ತೀರವಿದ್ದು, ಇದರಲ್ಲಿ ಮೂರನೇ ಒಂದಷ್ಟು ಸವಕಳಿ ಹಾಗೂ ತೀವ್ರ ವಾತಾವರಣದಿಂದಾಗಿ ಅಪಾಯದಲ್ಲಿದೆ. ದೇಶದ ಜನಸಂಖ್ಯೆಯ ಸುಮಾರು 25 ಕೋಟಿ ಮಂದಿ ತಮ್ಮ ನಿತ್ಯ ಜೀವನಕ್ಕೆ ಕರಾವಳಿ ತೀರವನ್ನೇ ಆಶ್ರಯಿಸಿದ್ದಾರೆ. ಈ ಪ್ರದೇಶಗಳು ಸುಮಾರು 18 ಸಾವಿರ ಪ್ರಬೇಧದ ಪ್ರಾಣಿ ಮತ್ತು ಸಸ್ಯ ಸಂಪತ್ತಿಗೆ ಆವಾಸ ಸ್ಥಾನವಾಗಿದೆ.
.ಸ್ತ್ರೀ ಸಬಲೀಕರಣ: ಭಾರತದ ಕ್ರಮಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ.
ಕರಾವಳಿ ಸವಕಳಿ, ಪ್ರದೂಷಣೆ, ತೀವ್ರ ಮೀನುಗಾರಿಕೆ, ಮ್ಯಾಂಗ್ರೋವ್ ಕಾಡುಗಳ ಅವನತಿ ಮತ್ತು ನಗರ ಒತ್ತಡದಿಂದಾಗಿ ಕಡಲಿನ ಜೀವ ವ್ಯವಸ್ಥೆ ಅಪಾಯದ ಮಟ್ಟದಲ್ಲಿದೆ.

‘ತಮಿಳುನಾಡು ಮತ್ತು ಕರ್ನಾಟಕದಲ್ಲಿ, ಈ ಯೋಜನೆಯು 1 ಲಕ್ಷ ಜನರಿಗೆ ಜ್ಞಾನ, ಕೌಶಲ್ಯ ಅಭಿವೃದ್ಧಿ ಸಹಾಯ ಮಾಡಲಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಹಣವನ್ನು ಬಳಸಿಕೊಳ್ಳುವ ಮೂಲಕ ಎರಡೂ ರಾಜ್ಯಗಳ ಕರಾವಳಿ ನಿರ್ವಹಣಾ ಯೋಜನೆಗಳನ್ನು ಬೆಂಬಲಿಸುತ್ತದೆ’ ಎಂದು ವಿಶ್ವಬ್ಯಾಂಕ್ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
.ಸಂಚಾರ ಮಾರ್ಗ: ವಿಶ್ವಬ್ಯಾಂಕ್ ನೆರವು.
ಯೋಜನೆಯು ಸುಸ್ಥಿರ ಪ್ರವಾಸೋದ್ಯಮದಂಥ ವಲಯಗಳಲ್ಲಿ ತರಬೇತಿ ಪಡೆದು ಆದಾಯದ ಹೊಸ ಮೂಲ ಪಡೆಯಲು ಮಹಿಳೆಯರು ಸೇರಿ 70 ಸಾವಿರ ಮಂದಿಗೂ ಈ ಯೋಜನೆ ಉಪಕಾರಿಯಾಗಲಿದೆ.
.ಪಡಿತರ ಸೋರಿಕೆ: ವಿಶ್ವಬ್ಯಾಂಕ್ ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.