ಡೆಹ್ರಾಡೂನ್ /ಶಿಮ್ಲಾ (ಪಿಟಿಐ): ಉತ್ತರ ಭಾರತದ ಹಲವು ಕಡೆಗಳಲ್ಲಿ ಪ್ರವಾಹ ಸ್ಥಿತಿ ಉಂಟು ಮಾಡಿರುವ ಮಹಾಮಳೆಯ ಭಯ ಮುಂದುವರಿದ್ದು, ಉತ್ತರಾಖಂಡನ 90 ಧರ್ಮಶಾಲೆಗಳಲ್ಲಿ ರಕ್ಷಣೆ ಪಡೆದಿದ್ದ ಸಾವಿರಾರು ಭಕ್ತರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಕೇದಾರನಾಥದಲ್ಲಿ ತೊಂದರೆಗೆ ಸಿಲುಕಿರುವವರ ರಕ್ಷಣಾ ಕಾರ್ಯ ಗುರುವಾರ ಭರದಿಂದ ಸಾಗಿದೆ.

ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿರುವ ತನ್ನ ವರದಿಯಲ್ಲಿ 90 ಧರ್ಮಶಾಲೆಗಳಲ್ಲಿ ಆಶ್ರಯಪಡೆದಿದ್ದ ಸಾವಿರಾರು ಜನರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇವರೆಗೆ ಸಾವಿನ ಸಂಖ್ಯೆ 150ಕ್ಕೆ ತಲುಪಿದೆ ಎಂದು ತಿಳಿಸಿದೆ.

ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ವಾತಾವರಣ ತಿಳಿಗೊಳ್ಳುತ್ತಿದ್ದು, ಈ ಎರಡು ಕಡೆಗಳಲ್ಲಿ ಸೇನಾಪಡೆಯ ಎರಡು ಹಾಗೂ ರಾಜ್ಯ ಸರ್ಕಾರದ ಒಂದು ಹೆಲಿಕಾಪ್ಟರ್ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು, ಇವರೆಗೆ 600 ಜನ ಪ್ರವಾಸಿಗರನ್ನು ರಕ್ಷಿಸಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ 12 ಹೆಲಿಕಾಪ್ಟರ್ಗಳನ್ನು ಈಗಾಗಲೇ ಬಳಸಿಕೊಳ್ಳಲಾಗಿದ್ದು, ಇದರ ಹೊರತಾಗಿಯೂ ಕಾರ್ಯಾಚರಣೆ ಚುರುಕುಗೊಳಿಸಲು ಮತ್ತೆ 8 ಹೆಲಿಕಾಪ್ಟರ್ಗಳನ್ನು ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಕ್ಷಣಾ ಕಾರ್ಯಾಚರಣೆಗಾಗಿ ಡೆಹ್ರಾಡೂನ್ನಿಂದ ಎರಡು ಹೆಲಿಕಾಪ್ಟರ್ಗಳು ಕಾರ್ಯನಿರ್ವಹಿಸುತ್ತಿದ್ದು, ಭಕ್ತರ ರಕ್ಷಣೆಗಾಗಿ ಸೇನೆಯು ತನ್ನ ಪಡೆಗಳನ್ನು ನಿಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.