ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಅನರ್ಹ ಪಡಿತರ ಚೀಟಿ ರದ್ದತಿಗೆ ಕೇಂದ್ರ ಸೂಚನೆ: 7.76 ಲಕ್ಷ ಕಾರ್ಡ್‌ಗಳಿಗೆ ಕುತ್ತು

ಕ್ರಮಕ್ಕೆ ಮುಂದಾದ ಸರ್ಕಾರ
Published : 14 ಸೆಪ್ಟೆಂಬರ್ 2025, 19:30 IST
Last Updated : 14 ಸೆಪ್ಟೆಂಬರ್ 2025, 19:30 IST
ಫಾಲೋ ಮಾಡಿ
Comments
ತಿಳಿವಳಿಕೆ ನೋಟಿಸ್‌ನಲ್ಲಿ ಏನಿದೆ?
ಕೇಂದ್ರದ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿರುವ ಆಹಾರ ಇಲಾಖೆ, ₹1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರಿಗೆ ತಿಳಿವಳಿಕೆ ನೋಟಿಸ್‌ ನೀಡುತ್ತಿದೆ. ‘ತಂತ್ರಾಂಶದಲ್ಲಿ ನಮೂದಾಗಿರುವ ಸಿಬಿಡಿಟಿ ವರದಿಯಲ್ಲಿ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚು ಕಂಡುಬಂದಿದೆ. ಸರ್ಕಾರದ ಮಾನದಂಡಗಳ ಅನುಸಾರ ಬಿಪಿಎಲ್‌ ಪಡಿತರಚೀಟಿ ಹೊಂದಲು ಅನರ್ಹರಾಗಿದ್ದು, ಬಿ‍ಪಿಎಲ್‌ ಪಡಿತರ ಚೀಟಿಯನ್ನು ಎಪಿಎಲ್‌ ಪಡಿತರ ಚೀಟಿಯಾಗಿ ಪರಿವರ್ತಿಸಬೇಕು. ಈ ನೋಟಿಸ್‌ಗೆ ಆಕ್ಷೇಪಣೆ ಇದ್ದರೆ ಕುಟುಂಬದ ಎಲ್ಲ ಸದಸ್ಯರ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಪ್ರತಿಯೊಂದಿಗೆ ಏಳು ದಿನಗಳ ಒಳಗೆ ಕಚೇರಿಗೆ ಸಲ್ಲಿಸಬೇಕು. ತಪ್ಪಿದರೆ 'ಕರ್ನಾಟಕ ಪಡಿತರ ಚೀಟಿಗಳ ಅನಧಿಕೃತ ಸ್ವಾಧೀನ ತಡೆಗಟ್ಟುವಿಕೆ ಆದೇಶ-1977’ ಹಾಗೂ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಈ ನೋಟಿಸ್‌ನಲ್ಲಿ ತಹಶೀಲ್ದಾರ್‌ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರಚೀಟಿ ಗಳಿರುವ ಬಗ್ಗೆ ಕೇಂದ್ರ ಸರ್ಕಾರದಿಂದ ಪಟ್ಟಿ ಬಂದಿದೆ. ಕೇಂದ್ರದ ಮಾನದಂಡದಂತೆ ನಾವು ಕ್ರಮ ತೆಗೆದುಕೊಳ್ಳಲೇ ಬೇಕಿದೆ. ಈ ಬಗ್ಗೆ ಚರ್ಚಿಸಲು ಸೋಮವಾರ (ಸೆ. 15) ಸಭೆ ನಡೆಸಲಿದ್ದೇವೆ. ಏನು ಮಾಡಬೇಕೆಂದು ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಸ್ವಲ್ಪ ಕಷ್ಟವಿದೆ. ಯೋಚನೆ ಮಾಡಿ ಮಾಡಬೇಕಿದೆ. ರಾಜ್ಯ ಸರ್ಕಾರ ಗುರುತಿಸಿದ ಅನರ್ಹ ಪಡಿತರಚೀಟಿಗಳನ್ನು ರದ್ದುಪಡಿಸುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ.
– ಕೆ.ಎಚ್‌. ಮುನಿಯಪ್ಪ, ಆಹಾರ ಸಚಿವ
ವಾರ್ಷಿಕ ಆದಾಯ ₹ 1.20 ಲಕ್ಷಕ್ಕಿಂತ ಹೆಚ್ಚು ಇದ್ದ ಫಲಾನುಭವಿಗೆ ನೀಡಿದ ನೋಟಿಸ್
ವಾರ್ಷಿಕ ಆದಾಯ ₹ 1.20 ಲಕ್ಷಕ್ಕಿಂತ ಹೆಚ್ಚು ಇದ್ದ ಫಲಾನುಭವಿಗೆ ನೀಡಿದ ನೋಟಿಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT