ಬೆಂಗಳೂರು: ತಮಿಳುನಾಡು ಮತ್ತು ಕರ್ನಾಟಕದ ಮಧ್ಯೆ ಕಾವೇರಿ ನೀರು ಹಂಚಿಕೆ ವಿವಾದವನ್ನು ರಾಮಕೃಷ್ಣ ಹೆಗಡೆಯವರು ಮತ್ತು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂಜಿಆರ್ ಇತ್ಯರ್ಥಪಡಿಸಲು ಮುಂದಾಗಿದ್ದರು. ಅಂತಿಮ ಹಂತಕ್ಕೂ ಬಂದಿತ್ತು ಎಂದು ಪಿ.ಜಿ.ಆರ್. ಸಿಂಧ್ಯ ಅವರು ತಿಳಿಸಿದ್ದಾರೆ.

ರಾಮಕೃಷ್ಣ ಅವರ 99ನೇ ಜನ್ಮದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಚಿಂತನ–ಮಂಥನ ಸಭೆಯಲ್ಲಿ ಈ ಕುತೂಹಲಕಾರಿ ಅಂಶವನ್ನು ಅವರು ಬಹಿರಂಗಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದರೆ, ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಇಬ್ಬರೂ ಉತ್ತಮ ಆಡಳಿತಗಾರರಾಗಿದ್ದರು. ಕಾವೇರಿ ನೀರಿನ ಸಮಸ್ಯೆಯನ್ನು ಮುಕ್ತಾಯಗೊಳಿಸಬೇಕು ಎಂದು ಎಂ.ಜಿ.ಆರ್ ಅವರನ್ನು ಹೆಗಡೆಯವರು ಬೆಂಗಳೂರಿಗೆ ಕರೆಸಿದ್ದರು ಎಂದು ಮಾಹಿತಿ ನೀಡಿದರು.

ಆ ಸಭೆಯಲ್ಲಿ ಎಚ್.ಡಿ. ದೇವೇಗೌಡ ಎಸ್.ಆರ್. ಬೊಮ್ಮಾಯಿ ಸಹಿತ ಅನೇಕರಿದ್ದರು. 180 ಟಿಎಂಸಿ ಅಡಿ ನೀರು ಬಿಡುವುದಿದ್ದರೆ ಒಪ್ಪಂದಕ್ಕೆ ಸಹಿ ಹಾಕಲು ತಯಾರು ಎಂದು ಎಂ.ಜಿ.ಆರ್. ತಿಳಿಸಿದ್ದರು. ಹೆಗಡೆಯವರೂ ಒಪ್ಪಿದ್ದರು. ಆದರೆ ನಮ್ಮಲ್ಲಿ ಕೆಲವರು ವಿರೋಧಿಸಿದ್ದರಿಂದ ಆಗ ಒಪ್ಪಂದ ನಡೆಯಲಿಲ್ಲ ಎಂದು ನೆನಪು ಮಾಡಿಕೊಂಡರು.

ಕಾವೇರಿ ಸಮಸ್ಯೆ ಇರಬಾರದು ಎಂದು ಬಯಸಿದ್ದ ಎಂಜಿಆರ್ ಆ ಮೇಲೆ ಹೆಚ್ಚು ಸಮಯ ಬದುಕಲಿಲ್ಲ. ಆ ನಂತರ ಬಂದ ರಾಜಕಾರಣಿಗಳಿಗೆ ವಿವಾದ ಮುಕ್ತಾಯವಾಗುವುದು ಇಷ್ಟವಾಗದೇ ಜೀವಂತವಾಗಿಡುತ್ತಾ ಬಂದರು. ನ್ಯಾಯಾಧೀಕರಣದ ಆದೇಶದಂತೆ 195 ಟಿಎಂಸಿ ಅಡಿ ನೀರು ಬಿಡಬೇಕಾಗಿ ಬಂತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.