ಬೆಂಗಳೂರು: ಸಿಇಟಿಯಲ್ಲಿ ಅರ್ಹತೆ ಪಡೆದು ಎಂಜಿನಿಯರಿಂಗ್ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ 2025–26ನೇ ಸಾಲಿನಲ್ಲಿ 1.41 ಲಕ್ಷ ಸೀಟುಗಳು ಲಭ್ಯವಿವೆ.

ವಿವಿಧ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳೂ ಸೇರಿ 1,41,009 ಸೀಟುಗಳ ಅಂತಿಮ ಪಟ್ಟಿಯನ್ನು (ಸೀಟ್ ಮ್ಯಾಟ್ರಿಕ್ಸ್) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಬಿಡುಗಡೆ ಮಾಡಿದೆ.

2024–25ನೇ ಸಾಲಿನಲ್ಲೂ ಎಂಜಿನಿಯರಿಂಗ್ ಸೀಟುಗಳ ಸಂಖ್ಯೆ 1.41 ಲಕ್ಷ ಇತ್ತು. ಈ ವರ್ಷವೂ ಅಷ್ಟೇ ಸಂಖ್ಯೆಯ ಸೀಟುಗಳು ಲಭ್ಯವಾಗಿವೆ. ಕಂಪ್ಯೂಟರ್ ಸೈನ್ಸ್ 30,573, ಕೃತಕ ಬುದ್ಧಿಮತ್ತೆ 7,209, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ 19,407, ಮಾಹಿತಿ ವಿಜ್ಞಾನ 10,473, ಮೆಕ್ಯಾನಿಕಲ್ 8,930, ಸಿವಿಲ್ 8,280 ಸೀಟುಗಳು ಲಭ್ಯವಿವೆ.

ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಪ್ರಕರಣದಲ್ಲಿ ಹೆಸರಿರುವ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ನ್ಯೂ ಹೊರೈಜನ್ ಎಂಜಿನಿಯರಿಂಗ್ ಕಾಲೇಜುಗಳ ಹೆಚ್ಚುವರಿ ಸೀಟುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳನ್ನೂ ಹಂಚಿಕೆಯ ಪಟ್ಟಿಗೆ ಪರಿಗಣಿಸಲಾಗಿದ್ದು, ಅಣಕು ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಲು ಪ್ರಾಧಿಕಾರ ಸಿದ್ಧತೆ ನಡೆಸಿದೆ.

ನೀಟ್ ಅಂಕಗಳ ಆಧಾರದಲ್ಲಿ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ಸೀಟು ಹಂಚಿಕೆಯ ಮೊದಲ ಸುತ್ತು ಮುಗಿಯುತ್ತಿದ್ದಂತೆ ಎಂಜಿನಿಯರಿಂಗ್ ಸೇರಿದಂತೆ ಇತರೆ ವೃತ್ತಿ ಶಿಕ್ಷಣ ಕೋರ್ಸ್ಗಳ ಸೀಟು ಹಂಚಿಕೆ ನಡೆಯಲಿದೆ. ದಿನಾಂಕ ಶೀಘ್ರ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

2025–26ನೇ ಸಾಲಿನಲ್ಲಿ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶ ಬಯಸಿ 3.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಮೇ 24ರಂದು ಫಲಿತಾಂಶ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.