ಬೆಂಗಳೂರು: ಇದೇ ಫೆಬ್ರುವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (ಜಿಮ್) ರಾಜ್ಯ ಸರ್ಕಾರ ₹100.69 ಕೋಟಿ ವೆಚ್ಚ ಮಾಡಿದೆ. 2022ರಲ್ಲಿ ಬಿಜೆಪಿ ಸರ್ಕಾರ ಆಯೋಜಿಸಿದ್ದ ಜಿಮ್ಗೆ ₹74.99 ಕೋಟಿ ವೆಚ್ಚವಾಗಿತ್ತು. ಈಗಿನ ಸರ್ಕಾರ ಅದಕ್ಕಿಂತ ಹೆಚ್ಚುವರಿಯಾಗಿ ₹25.77 ಕೋಟಿ ವೆಚ್ಚ ಮಾಡಿದೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದ ಒಟ್ಟು ವೆಚ್ಚದಲ್ಲಿ ಅತಿ ಹೆಚ್ಚು ಖರ್ಚಾಗಿದ್ದು, ಇವೆಂಟ್ ಮ್ಯಾನೇಜ್ಮೆಂಟ್ ಸೇವೆಗಳಿಗೆ. ಸಮಾವೇಶ ನಡೆಸಿದ ಜಾಗದ ಬಾಡಿಗೆಗೆ ₹2.12 ಕೋಟಿ ಮತ್ತು ಜಾಹೀರಾತು–ಪ್ರಚಾರಕ್ಕೆ ₹21.83 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ವಿಧಾನ ಪರಿಷತ್ತಿಗೆ ನೀಡಿದ ಉತ್ತರದಲ್ಲಿದೆ.

ಜಿಮ್ನ ಭಾಗವಾಗಿ ವಿದೇಶಗಳಲ್ಲಿ ನಡೆಸಿದ ರೋಡ್ಷೋಗಳಿಗೆ ₹5.58 ಕೋಟಿ ವೆಚ್ಚವಾಗಿದೆ. ಚೆನ್ನೈ, ಮುಂಬೈ, ದೆಹಲಿ ರೋಡ್ಷೋಗಳಿಗೆ ಕ್ರಮವಾಗಿ ₹52.13 ಲಕ್ಷ, ₹64.21 ಲಕ್ಷ, ₹36.26 ಲಕ್ಷ ವೆಚ್ಚವಾಗಿದ್ದರೆ, ರಾಜ್ಯದ ಹಲವೆಡೆ ನಡೆಸಲಾದ ಸಭೆಗಳಿಗೆ ₹37.90 ಲಕ್ಷ ವೆಚ್ಚವಾಗಿದೆ.

ಸಮಾವೇಶದಲ್ಲಿ ಊಟದ ವ್ಯವಸ್ಥೆಗಾಗಿ ₹2.72 ಕೋಟಿ, ಉಡುಗೊರೆಗಳಿಗೆ ₹46.77 ಲಕ್ಷ, ಪತ್ರ ವ್ಯವಹಾರ ಮತ್ತು ಲೆಕ್ಕಪರಿಶೋಧನೆಗೆ ₹4.72 ಲಕ್ಷ, ಸಾರಿಗೆ ವ್ಯವಸ್ಥೆಗೆ ₹1.52 ಕೋಟಿ, ಹೋಟೆಲ್ ಕೊಠಡಿಗಳಿಗಾಗಿ ₹97.87 ಲಕ್ಷ, ಪೂರ್ವಭಾವಿ ಕಾರ್ಯಕ್ರಮಕ್ಕೆ ₹81.96 ಲಕ್ಷ ವೆಚ್ಚ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.