ಬೆಂಗಳೂರು: ದ್ವೇಷ ಭಾಷಣ ತಡೆಗೆ ಕರ್ನಾಟಕ ಸರ್ಕಾರ ಕಾನೂನು ತರಲು ಹೊರಟಿರುವುದು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಅದರ ವಿರುದ್ದ ಬಿಜೆಪಿ ಕಾನೂನಾತ್ಮಕ ಹೋರಾಟ ನಡೆಸಸಲಿದೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ‘ಎಕ್ಸ್’ ಮಾಡಿರುವ ಅವರು, ‘ಉದ್ದೇಶಿತ ಕಾಯ್ದೆಯು ನಮ್ಮ ವಾಕ್ ಹಾಗೂ ವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸುವ ಕಾನೂನಾಗಲಿದೆ. ಈಗಾಗಲೇ ದ್ವೇಷದ ಭಾಷಣ ತಡೆಯಲು ಸಾಕಷ್ಟು ಕಾನೂನುಗಳಿವೆ. ಅವನ್ನು ಬಳಸಬಹುದು. ಹಾಗಿದ್ದರೂ ಹತ್ತು ವರ್ಷ ಶಿಕ್ಷೆ ವಿಧಿಸುವ ಕಾನೂನು ತಂದು, ಸರ್ಕಾರದ ವಿರುದ್ದ, ಅವರ ಪಕ್ಷದ ವಿರುದ್ದ ಮಾತನಾಡುವವರಿಗೆ ಜಾಮೀನು ರಹಿತ ವಾರಂಟ್ ತಂದು ಜೈಲಿಗೆ ಕಳುಹಿಸುವ ಹುನ್ನಾರ ಇದರ ಹಿಂದಿದೆ’ ಎಂದು ಆರೋಪಿಸಿದ್ದಾರೆ.

‘ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗಿದೆ ಎಂಬ ಭಾವನೆ ಬರುವಂತಹ ಸ್ಥಿತಿ ಬಂದೊದಗಿದೆ. ಅಭಿವೃದ್ದಿ ಕೆಲಸದತ್ತ ಗಮನಹರಿಸದೇ, ಎಲ್ಲ ರಂಗದಲ್ಲಿಯೂ ಭ್ರಷ್ಟಾಚಾರದಲ್ಲಿ ಸರ್ಕಾರ ತೊಡಗಿದೆ. ಇದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ರಾಜಕಾರಣಕ್ಕೆ ಕಪ್ಪು ಚುಕ್ಕೆ. ವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಅದರ ತದ್ವಿರುದ್ದವಾಗಿ ನಡೆದುಕೊಂಡಿದ್ದಾರೆ’ ಎಂದು ಅವರು ದೂರಿದ್ದಾರೆ.
.ಬಿಜೆಪಿಯೇ ದ್ವೇಷಭಾಷಣದ ಪಿತಾಮಹ: ಡಿ.ಕೆ.ಶಿವಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.