ಬೆಂಗಳೂರು: ಮುಂದಿನ 5 ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗುವ ಕರ್ಮ ಸಿದ್ದರಾಮಯ್ಯಗೆ ಬರಬಾರದಿತ್ತು ಎಂದು ಜೆಡಿಎಸ್ ಲೇವಡಿ ಮಾಡಿದೆ.

‘ಐದು ವರ್ಷ ನಾನೇ ಮುಖ್ಯಮಂತ್ರಿ. ಆ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದರು. ಇದೇ ವಿಚಾರವಾಗಿ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್, ‘ನಾನೇ ಸಿಎಂ.. ನಾನೇ ಸಿಎಂ.. ಎಂದು ಮಾಧ್ಯಮಗಳ ಮುಂದೆ ಗಂಟಲು ಹರಿದುಕೊಳ್ಳುತ್ತಿರುವುದರ ಹಿಂದೆ ಸಿಎಂ ಕುರ್ಚಿ ಅಲುಗಾಡುತ್ತಿರುವುದನ್ನು ಸೂಚಿಸುತ್ತಿದೆ’ ಎಂದು ಕುಟುಕಿದೆ.

ನಾಯಕತ್ವ ಬದಲಾವಣೆ ಆಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಇಕ್ಬಾಲ್ ಹುಸೇನ್, ಎಚ್.ಸಿ ಬಾಲಕೃಷ್ಣ, ರಂಗನಾಥ್, ರವಿ ಗಾಣಿಗ ಸೇರಿದಂತೆ ಹಲವರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಇನ್ನು ತಮ್ಮ ನಾಯಕನ ಕುರ್ಚಿಗೆ ಕುತ್ತು ಬಂದಿರುವುದು ಸ್ಪಷ್ಟವಾಗುತ್ತಲೇ ಸಿದ್ದರಾಮಯ್ಯ ಆಪ್ತರು ಸಹ ಕೂಗುಮಾರಿಗಳಂತೆ ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದು ಜೆಡಿಎಸ್ ಗುಡುಗಿದೆ.

‘ಲಾಟರಿ ಸಿಎಂ’ ಸಿದ್ದರಾಮಯ್ಯ ಅವರೇ, ನಿಮ್ಮ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಮತ್ತು ನಿಮ್ಮ ನಾಯಕತ್ವದ ಬಗ್ಗೆ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಬೆಂಕಿ ಎದ್ದು, ಹಾದಿ ಬೀದಿಯಲ್ಲಿ ಹೊಗೆಯಾಡುತ್ತಿದೆ. ವಿಪಕ್ಷಗಳ ವಿರುದ್ಧ ಬೆಂಕಿಯುಗುಳಿದರೇ, ನಿಮ್ಮ ಹೊಟ್ಟೆ ಕಿಚ್ಚು ಮತ್ತಷ್ಟು ಉಲ್ಬಣಿಸುತ್ತದೆ ಹೊರತು ಉಪಶಮನವಾಗುವುದಿಲ್ಲ ಎಂದು ಜೆಡಿಎಸ್ ಕಿಡಿಕಾರಿದೆ.ಸ
.ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಿರಬಹುದು: ಸಿದ್ದರಾಮಯ್ಯ.ಸಿದ್ದರಾಮಯ್ಯ ಕೆಳಕ್ಕಿಳಿಸಲು ಕ್ರಾಂತಿಯೇ ಆಗಬೇಕು: ವಾಟಾಳ್ ನಾಗರಾಜ್.ಐದು ವರ್ಷ ನಾನೇ ಸಿಎಂ: ನಾಯಕತ್ವ ಬದಲಾವಣೆ ಕೂಗಿಗೆ ತೆರೆ ಎಳೆದ ಸಿದ್ದರಾಮಯ್ಯ.ನನ್ನ- ಸಿದ್ದರಾಮಯ್ಯ ಸಂಬಂಧ ಹಾಳು ಮಾಡಲು ಯತ್ನ: ಶಾಸಕ ಬಿ.ಆರ್. ಪಾಟೀಲ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.