ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರದಲ್ಲಿ ಯಾವ ಕಾಲಕ್ಕೆ ಯಾವ ರೀತಿಯ ‘ಔಷಧ’ ಕೊಡಬೇಕೆಂದು ಹೈಕಮಾಂಡ್ಗೆ ಗೊತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಾಯಕತ್ವ ಬದಲಾವಣೆ ಇಲ್ಲ. ಸದ್ಯ ಸರ್ಕಾರದ ಆದ್ಯತೆ ಬೇರೆಯಾಗಿದೆ. ನೆರೆ ಪರಿಹಾರ, ಅಭಿವೃದ್ದಿ ವಿಚಾರವಾಗಿ ಸರ್ಕಾರ ಗಮನಹರಿಸುತ್ತಿದೆ’ ಎಂದರು.

‘ನಾಯಕತ್ವ ಬದಲಾವಣೆ ಕುರಿತ ಗೊಂದಲವನ್ನು ಬಗೆಹರಿಸಬೇಕೆಂದು ಸಚಿವ ಸತೀಶ ಜಾರಕಿಹೊಳಿ ಹೇಳಿರುವುದು ಸರಿ ಇದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ’ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, ‘ಲಿಂಗಾಯತ ಹಾಗೂ ವೀರಶೈವ ಧರ್ಮ ಒಂದೆಯಾ, ಬೇರೆ ಬೇರೆಯಾ ಎಂಬುವುದನ್ನು ಆ ಸಮುದಾಯದವರು ಮೊದಲು ಸರಿಪಡಿಸಲಿ. ಅದನ್ನು ಸರಿಪಡಿಸಿದರೆ ಎಲ್ಲವೂ ಸರಿಯಾಗಲಿದೆ’ ಎಂದು ಹೇಳಿದರು.

‘ಲಿಂಗಾಯತ ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೋಗಿರುವುದು ತಪ್ಪಲ್ಲ. ಅವರು ಅಲ್ಲಿ ಧಾರ್ಮಿಕ, ಧರ್ಮ ಪ್ರತ್ಯೇಕತೆಯ ಬಗ್ಗೆ ಮಾತನಾಡಿಲ್ಲ. ‘ನಮ್ಮ ಮೆಟ್ರೊ’ಗೆ ಬಸವಣ್ಣ ಅವರ ಹೆಸರು ಇಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.