ಬೆಂಗಳೂರು: ಬಂಡವಾಳ ಆಕರ್ಷಣೆಗಾಗಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕೈಗಾರಿಕಾ ಇಲಾಖೆಯ ಅಧಿಕಾರಿಗಳ ನಿಯೋಗವು ಇದೇ 24ರಿಂದ ಮೂರು ದಿನ ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದು, ಬ್ರಿಟನ್–ಇಂಡಿಯಾ ವಾಣಿಜ್ಯ ಒಕ್ಕೂಟದ ಸಮ್ಮೇಳನದಲ್ಲಿ ಭಾಗಿಯಾಗಲಿದೆ.

ಬ್ರಿಟನ್ನ ಕಾಮನ್ವೆಲ್ತ್ ವ್ಯವಹಾರಗಳ ಸಚಿವೆ ಸೀಮಾ ಮಲ್ಹೋತ್ರಾ ಮತ್ತು ಭಾರತದಲ್ಲಿನ ಬ್ರಿಟನ್ ಹೈಕಮಿಷನರ್ ಲಿಂಡಾ ಕೆಮಾರೂನ್ ಅವರ ಜತೆ ಗುರುವಾರ ನಡೆಸಿದ ಸಭೆಯ ನಂತರ ಸಚಿವ ಎಂ.ಬಿ.ಪಾಟೀಲರು ಈ ಮಾಹಿತಿ ನೀಡಿದ್ದಾರೆ.

‘ಬ್ರಿಟನ್, ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಬ್ರಿಟನ್ ಪ್ರವಾಸದ ವೇಳೆ ಎಲಿಮೆಂಟ್–6, ಎಆರ್ಎಂ, ಲಿಂಡೆ, ಮಾರ್ಟಿನ್ ಬೇಕರ್, ಫಿಡೊ ಎಐ, ಆಕ್ಸ್ಫರ್ಡ್ ಸ್ಪೇಸ್ ಸಿಸ್ಟಮ್ಸ್ ಸೇರಿ ಹಲವು ಬೃಹತ್ ಉದ್ದಿಮೆ ಸಮೂಹಗಳ ಪ್ರತಿನಿಧಿಗಳ ಜತೆ ಸಭೆ ನಡೆಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಉನ್ನತ ಶಿಕ್ಷಣ, ತಂತ್ರಜ್ಞಾನ ವಿನಿಮಯ, ವೈಮಾಂತರಿಕ್ಷ ಮತ್ತು ರಕ್ಷಣಾ, ವಿದ್ಯುತ್ ಚಾಲಿತ ವಾಹನ, ಹಸಿರು ಇಂಧನ ಕ್ಷೇತ್ರಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಅವಕಾಶಗಳನ್ನು ವಿವರಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.