ಬೆಂಗಳೂರು: ವಿಧಾನಪರಿಷತ್ತಿನ ಭರವಸೆಗಳ ಸಮಿತಿ ‘ಅಧ್ಯಯನ’ದ ಹೆಸರಿನಲ್ಲಿ
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭ ಮೇಳ ಹಾಗೂ ಉತ್ತರ ಪ್ರದೇಶದ ಪ್ರಮುಖ ತೀರ್ಥಕ್ಷೇತ್ರಗಳಿಗೆ ಪ್ರವಾಸ ಹೊರಟಿದೆ.

ಕಾರ್ಯಕ್ರಮ ಪಟ್ಟಿಯ ಪ್ರಕಾರ, ಟಿ.ಎ.ಶರವಣ ಅಧ್ಯಕ್ಷತೆಯ ಈ ಸಮಿತಿಯು ಉತ್ತರಪ್ರದೇಶದ ವಿಧಾನಪರಿಷತ್ ಭರವಸೆಗಳ ಸಮಿತಿ ಮತ್ತು ರಾಜ್ಯಸಭೆಯ ಭರವಸೆಗಳ ಸಮಿತಿ ಜತೆ ಅಧ್ಯಯನದ ಉದ್ದೇಶದ ಸಭೆ ನಡೆಸಲಿದೆ. ಜತೆಗೆ ಸಂಸತ್ ಭವನದ ವೀಕ್ಷಣೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಒಟ್ಟು ಆರು ದಿನಗಳ ಪ್ರವಾಸ ಹಮ್ಮಿಕೊಂಡಿದೆ.

ಆಗ್ರಾ, ದೆಹಲಿ, ಕಾಶಿ, ಪ್ರಯಾಗರಾಜ್, ಅಯೋಧ್ಯೆ ಮತ್ತು ಲಖನೌಕ್ಕೆ ಈ ತಂಡ ಭೇಟಿ ನೀಡಲಿದೆ. ಸಮಿತಿ ಅಧ್ಯಕ್ಷ ಟಿ.ಎ.ಶರವಣ ಅವರ ಜತೆ ಸದಸ್ಯರಾದ ಹಣಮಂತ ನಿರಾಣಿ, ಪ್ರತಾಪ್ ಸಿಂಹ ನಾಯಕ್, ಡಿ.ಎಸ್.ಅರುಣ್, ಕೆ.ಎಸ್.ನವೀನ್, ಮಂಜುನಾಥ್ ಭಂಡಾರಿ, ತಿಪ್ಪಣ್ಣಪ್ಪ ಕಮಕನೂರ, ಪರಿಷತ್ ಅಧಿಕಾರಿಗಳಾದ ಎಸ್.ನಿರ್ಮಲಾ, ಎಚ್.ಮಲ್ಲೇಶಪ್ಪ, ಎಚ್.ಆರ್.ವಿಜಯಕುಮಾರ್ ಪ್ರವಾಸಕ್ಕೆ ತಯಾರಾಗಿದ್ದಾರೆ. ಸಮಿತಿ ಸದಸ್ಯರ ಕುಟುಂಬ ವರ್ಗದವರು ಸೇರಿ ಒಟ್ಟು 18ರಿಂದ 20 ಮಂದಿ ಕುಂಭಮೇಳದತ್ತ ಇದೇ 16ರಂದು ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ ಎಂದು ವಿಧಾನಪರಿಷತ್ ಸಚಿವಾಲಯದ ಮೂಲಗಳು ತಿಳಿಸಿವೆ.

ಅಚ್ಚರಿ ಎಂದರೆ, ದೆಹಲಿಯಲ್ಲಿ ರಾಜ್ಯಸಭೆ ಭರವಸೆಗಳ ಸಮಿತಿಯ ಜತೆಗೆ ಭೇಟಿಗೆ ಅವಕಾಶ ಸಿಕ್ಕಿಲ್ಲ. ಅಂತಹ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪರಿಪಾಟ ಹೊಂದಿಲ್ಲ ಎಂದು ರಾಜ್ಯಸಭೆ ಭರವಸೆ ಸಮಿತಿ
ಪ್ರತಿಕ್ರಿಯಿಸಿದೆ.

ಉತ್ತರಪ್ರದೇಶ ವಿಧಾನ ಪರಿಷತ್ ಭರವಸೆ ಸಮಿತಿಯನ್ನು ಸಂಪರ್ಕಿಸಿದಾಗ ಸದಸ್ಯರು ಕುಂಭಮೇಳದ ಉಸ್ತುವಾರಿ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ, ಬಿಡುವು ಇಲ್ಲ. ಆದ್ದರಿಂದ ಸಮಿತಿ ಜತೆ ಭೇಟಿ ಅಥವಾ ಸಭೆ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದಾಗಿ ಗೊತ್ತಾಗಿದೆ.

‘ಅಲ್ಲಿನ ಭರವಸೆ ಸಮಿತಿಗಳ ಜತೆ ಸಭೆ ನಡೆಯುವುದಿಲ್ಲ ಎಂದು ಗೊತ್ತಾದ ಮೇಲೂ ‘ಅಧ್ಯಯನ ಪ್ರವಾಸ’ ಹೋಗುವ ಔಚಿತ್ಯ ಏನಿದೆ? ತೀರ್ಥಕ್ಷೇತ್ರಗಳಿಗೆ ಹೋಗಬೇಕು, ಕುಂಭ ಮೇಳದಲ್ಲಿ ಭಾಗವಹಿಸಬೇಕು ಎನ್ನುವುದಾದರೆ ಸ್ವಂತ ಖರ್ಚಿನಲ್ಲಿ ಹೋಗಬಹುದು. ತೆರಿಗೆದಾರರ ಹಣದಲ್ಲಿ ಏಕೆ ಹೋಗಬೇಕು’ ಎಂದು ವಿಧಾನಪರಿಷತ್ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕುಂಭ ಮೇಳಕ್ಕೆ ಇನ್ನೆರಡು ತಂಡ ಸಜ್ಜು:

ವಿಧಾನಸಭೆ ಮತ್ತು ಪರಿಷತ್ತಿನ 40ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರು ಕುಂಭಮೇಳಕ್ಕೆ ಹೋಗಲು ತಯಾರಿ ನಡೆಸಿದ್ದಾರೆ. ಇವರಲ್ಲಿ 20 ಶಾಸಕರು ವಿವಿಧ ಸಮಿತಿಗಳ ಮೂಲಕ ಅಧ್ಯಯನ ಪ್ರವಾಸ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇವರಲ್ಲಿ ಕೆಲವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿ ಕುಂಭಮೇಳಕ್ಕೆ ಹೋಗುವ ಇಂಗಿತವನ್ನು ವ್ಯಕ್ತಪಡಿಸಿ ಅನುಮತಿ ಕೇಳಿದಾಗ, ಅಧ್ಯಕ್ಷರು ಅದಕ್ಕೆ ಹಸಿರು ನಿಶಾನೆ ನೀಡಲಿಲ್ಲ. ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೋಗಿ ಬಂದಿದ್ದಾರೆ. ಅವರು ಹೋಗಬಹುದಾದರೆ ನಾವು ಏಕೆ ಹೋಗಬಾರದು? ನಮ್ಮ ಧಾರ್ಮಿಕ ಹಕ್ಕುಗಳನ್ನು ಪಾಲಿಸಬಾರದೇ’ ಎಂದು ಖರ್ಗೆಯವರನ್ನು ಪ್ರಶ್ನಿಸಿರುವುದಾಗಿ ಮೂಲಗಳು ತಿಳಿಸಿವೆ.

ಭರವಸೆಗಳ ಸಮಿತಿ ಕೆಲಸವೇನು?

ವಿಧಾನಮಂಡಲ ಕಲಾಪದಲ್ಲಿ ಸದಸ್ಯರ ಪ್ರಶ್ನೆಗಳು, ಮಸೂದೆಗಳು, ನಿರ್ಣಯಗಳು, ಪ್ರಸ್ತಾಪಗಳ ಮೇಲೆ ಚರ್ಚಿಸುವಾಗ ಸಚಿವರು ನೀಡುವ ಭರವಸೆ, ವಾಗ್ದಾನಗಳು, ಆಶ್ವಾಸನೆಗಳು ಕಾರ್ಯಗತಗೊಂಡಿವೆಯೇ ಎಂಬುದನ್ನು ಪರಿಶೀಲಿಸುವ ಹೊಣೆಯಷ್ಟೇ ಭರವಸೆ ಸಮಿತಿಗೆ ಇರುತ್ತದೆ.

ಸಚಿವರು ನೀಡಿದ ಭರವಸೆಗಳು ಎಷ್ಟರಮಟ್ಟಿಗೆ ಈಡೇರಿವೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದು, ಸದನಕ್ಕೆ ವರದಿ ಸಲ್ಲಿಸುವ ಕೆಲಸವನ್ನು ಸಮಿತಿ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.