ನವದೆಹಲಿ: ಕರಾವಳಿ ಕರ್ನಾಟಕದಲ್ಲಿ ಜನರಿಂದ ಭಾರಿ ಪ್ರತಿರೋಧ ಎದುರಿಸುತ್ತಿರುವ ಉಡುಪಿ–ಕಾಸರಗೋಡು 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಹಸಿರು ನಿಶಾನೆ ತೋರಿದೆ.

ಯೋಜನೆಯ ಅನುಷ್ಠಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಏಳು ಗ್ರಾಮಗಳ 31 ಹೆಕ್ಟೇರ್ ಅರಣ್ಯ ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ ಮಂಗಳೂರಿನ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಂಘ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ನೇತೃತ್ವದ ಪೀಠ ವಜಾಗೊಳಿಸಿದೆ.

‘ಯೋಜನೆಗಾಗಿ ಡೀಮ್ಡ್ ಅರಣ್ಯವನ್ನು ಅರಣ್ಯೇತರ ಭೂಮಿಯೆಂದು ಕಾನೂನುಬಾಹಿರವಾಗಿ ವರ್ಗೀಕರಿಸಲಾಗಿದೆ. ದೊಡ್ಡ ಪ್ರಮಾಣದ ಅರಣ್ಯೇತರ ಭೂಮಿಯನ್ನು ಯೋಜನೆಗಾಗಿ ಬಳಸಿಕೊಳ್ಳಲಾಗುತ್ತಿದೆ. 282.8 ಹೆಕ್ಟೇರ್ ಜಾಗದಲ್ಲಿ 1.77 ಲಕ್ಷ ಮರಗಳಿವೆ. ಈ ಭೂಮಿಯು ದಟ್ಟವಾದ ನೈಸರ್ಗಿಕ ಸಸ್ಯ ವರ್ಗ ಹಾಗೂ ಅರಣ್ಯದಂತಹ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ, ಈ ಯೋಜನೆಗೆ ತಡೆ ನೀಡಬೇಕು‘ ಎಂದು ಅರ್ಜಿದಾರರು ಎನ್ಜಿಟಿ ಮೆಟ್ಟಿಲೇರಿದ್ದರು.

ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ಅಂತರರಾಜ್ಯ ಪ್ರಸರಣ ವ್ಯವಸ್ಥೆ ಮೂಲಕ 1000 ಮೆಗಾವಾಟ್ನಷ್ಟು ಹೆಚ್ಚುವರಿ ವಿದ್ಯುತ್ ಸಾಗಿಸುವ ಸಾಮರ್ಥ್ಯ ಹೊಂದಲಿದೆ. ಈ ವಿದ್ಯುತ್ ಮಾರ್ಗವು ದಕ್ಷಿಣ ಭಾರತದಲ್ಲಿ ವಿದ್ಯುತ್ ಸರಬರಾಜು ಹಾಗೂ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಉಡುಪಿ–ಕಾಸರಗೋಡು ಟ್ರಾನ್ಸ್ಮಿಷನ್ ಲಿಮಿಟೆಡ್ ವಾದ ಮಂಡಿಸಿತ್ತು.

‘ಈ ಯೋಜನೆಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾದ ಕಾರಣಕ್ಕೆ ಮರಗಳ ಹನನ ಕಡಿಮೆ ಮಾಡಲು ಪರ್ಯಾಯ ಮಾರ್ಗ ಹುಡುಕುವಂತೆ ಕೇಂದ್ರ ಇಂಧನ ಸಚಿವಾಲಯ ನಿರ್ದೇಶನ ನೀಡಿತ್ತು. ಆ ಬಳಿಕ, ಗೋಪುರಗಳ ಎತ್ತರ ಹೆಚ್ಚಳ, ಡ್ರೋನ್ ತಂತ್ರಜ್ಞಾನ ಬಳಕೆ ಮತ್ತಿತರ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಯಿತು. ಇದರಿಂದಾಗಿ, 48,433 ಮರಗಳು ನಾಶವಾಗುವುದನ್ನು ತಪ್ಪಿಸಲಾಗಿದೆ‘ ಎಂದು ಕಂಪನಿ ಪ್ರತಿಪಾದಿಸಿತ್ತು.

‘ಪ್ರಸ್ತಾವಿತ ಅರಣ್ಯ ಪ್ರದೇಶದಲ್ಲಿ 8,145 ಮರಗಳನ್ನು ಗುರುತಿಸಲಾಗಿತ್ತು. ಅರಣ್ಯ ಬಳಕೆಗೆ 2022ರಲ್ಲಿ ಮೊದಲ ಹಂತದ ಅನುಮೋದನೆ ನೀಡಲಾಗಿತ್ತು. ಗುರುತಿಸಿರುವ ಮರಗಳ ಪೈಕಿ ಶೇ 40ರಷ್ಟನ್ನು ಮಾತ್ರ ಕತ್ತರಿಸಬೇಕು ಎಂದು ಅರಣ್ಯ ಇಲಾಖೆ ಷರತ್ತು ವಿಧಿಸಿತ್ತು. ಪರಿಹಾರಾತ್ಮಕ ಅರಣ್ಯೀಕರಣ ಹಾಗೂ ಅರಣ್ಯದ ಒಟ್ಟು ಮೌಲ್ಯಕ್ಕೆ (ಎನ್ಪಿವಿ) ನಿಗದಿಪಡಿಸಿರುವ ಮೊತ್ತವನ್ನು ಕಂಪನಿ ಈ ಹಿಂದೆಯೇ ಪಾವತಿಸಿದೆ. ಈ ಯೋಜನೆಗೆ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ಷರತ್ತುಬದ್ಧ ಅನುಮೋದನೆ ನೀಡಿದೆ’ ಎಂದು ಕೇಂದ್ರ ಅರಣ್ಯ ಸಚಿವಾಲಯವು ಎನ್ಜಿಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.