ಬೆಂಗಳೂರು: ಅಕ್ರಮವಾಗಿ ನೇಮಕವಾದ ಪಿಎಸ್‌ಐ ಅಭ್ಯರ್ಥಿಗಳ ತನಿಖೆ ನಡೆಸಲು ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ.

‘ಪ್ರಜಾವಾಣಿ ವರದಿ’ಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕೆಪಿಸಿಸಿ, ‘ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಈ ಸರ್ಕಾರವೇ ಹೊಣೆ. ಸರ್ಕಾರದ ಅಯೋಗ್ಯತನಕ್ಕೆ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಏಕೆ ಅನ್ಯಾಯವಾಗಬೇಕು?’ ಎಂದು ಪ್ರಶ್ನಿಸಿದೆ.

‘ಪ್ರಾಮಾಣಿಕ ಅಭ್ಯರ್ಥಿಗಳು ಹಾಗೂ ಅಕ್ರಮವಾಗಿ ನೇಮಕವಾದ ಅಭ್ಯರ್ಥಿಗಳನ್ನು ಸರ್ಕಾರ ತನಿಖೆ ನಡೆಸಿ ಗುರುತಿಸಿ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಗೃಹಸಚಿವರೇ, ಇದನ್ನಾದರೂ ಮಾಡುವಿರಾ?’ ಎಂದು ಕಾಂಗ್ರೆಸ್ ಕೇಳಿದೆ.

ಇದನ್ನೂ ಓದಿ:ಪಿಎಸ್‌ಐ ನೇಮಕಾತಿ ಪರೀಕ್ಷೆ: ಮೂವರಿಂದ ₹90 ಲಕ್ಷ ಪಡೆದ ಆರೋಪಿಗಳು!

ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆಯನ್ನೇ ರದ್ದುಪಡಿಸಿರುವ ಸರ್ಕಾರ, ಮರುಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ– ಪಿಎಸ್‌ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸೇರಿ ಐವರ ಬಂಧನ

ಪರೀಕ್ಷಾ ಅಕ್ರಮದ ಸೂತ್ರಧಾರಿ ಎನ್ನಲಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ ಆಗುತ್ತಿದ್ದಂತೆಯೇ ರಾಜ್ಯ ಸರ್ಕಾರ ಪರೀಕ್ಷೆ ರದ್ದುಪಡಿಸಿರುವುದೂ ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.