ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ದಾಳಿಗೆ 28 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರ ಸಾವು– ವರದಿ

Published 11 ಫೆಬ್ರುವರಿ 2024, 10:13 IST
Last Updated 11 ಫೆಬ್ರುವರಿ 2024, 10:13 IST
ಅಕ್ಷರ ಗಾತ್ರ

ಕೈರೋ: ಅಕ್ಟೋಬರ್ 7ರಿಂದ ಇಲ್ಲಿಯವರೆಗೆ ಗಾಜಾದ ಮೇಲೆ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಒಟ್ಟು 28,176 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ವರದಿ ಮಾಡಿದೆ.

ದಾಳಿಯಲ್ಲಿ 67,784ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.

ಕಳೆದ 24 ಗಂಟೆಗಳಲ್ಲಿ 112 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 173 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.

ರಫಾ ನಗರದ ಮೇಲೆ ಶನಿವಾರ(ಫೆ.10) ನಸುಕಿನಲ್ಲಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 31 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದರು.

ಮೃತರಲ್ಲಿ ಗಾಜಾದ ನಾಗರಿಕರು, ಹಮಾಸ್ ಬಂಡುಕೋರರು ಸೇರಿದ್ದಾರೆ ಎನ್ನಲಾಗಿದೆ. ತನ್ನ ಶತ್ರುಗಳ ಮೇಲೆ ಹಮಾಸ್ ಹಾರಿಸಿದ ರಾಕೆಟ್‌ ಆಕಸ್ಮಿಕವಾಗಿ ಗಾಜಾದಲ್ಲಿ ಸ್ಪೋಟಿಸಿಯೂ ಕೆಲವು ಸಾವುಗಳು ಸಂಭವಿಸಿವೆ.

ಇಸ್ರೇಲ್‌ ಸೇನೆ ಪ್ರಕಾರ, ದೇಶದೊಳಗೆ ಸುಮಾರು 1 ಸಾವಿರ ಹಮಾಸ್ ಬಂಡುಕೋರರನ್ನು ಸದೆಬಡಿದಿದ್ದು, ಗಾಜಾದೊಳಗೆ ಸುಮಾರು 10 ಸಾವಿರ ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT