ವಾಷಿಂಗ್ಟನ್, ಕ್ಯಾನ್‌ಬೆರಾ: ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ನಡುವೆ ಆಗಿದ್ದ ಒಪ್ಪಂದ ರದ್ದುಗೊಂಡಿರುವುದು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ.

ಅಮೆರಿಕ ಹಾಗೂ ಬ್ರಿಟನ್ ಜೊತೆ ಹೊಸ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಫ್ರಾನ್ಸ್‌ನೊಂದಿಗೆ ಈ ಮೊದಲು ಮಾಡಿಕೊಂಡಿದ್ದ ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದವನ್ನು ಆಸ್ಟ್ರೇಲಿಯಾ ಕೈಬಿಟ್ಟಿದೆ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಫ್ರಾನ್ಸ್, ಬ್ರಿಟನ್‌ನ ಸಶಸ್ತ್ರಪಡೆಗಳ ಸಚಿವರ ಜೊತೆ ಈ ವಾರ ನಡೆಯಬೇಕಿದ್ದ ಸಭೆಯನ್ನು ರದ್ದುಗೊಳಿಸಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಫ್ರಾನ್ಸ್, ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲಿರುವ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿರುವುದು ಬಿಕ್ಕಟ್ಟನ್ನು ಇನ್ನಷ್ಟು ಜಟಿಲಗೊಳಿಸಿದೆ.

ಫ್ರಾನ್ಸ್‌ನಿಂದ 12 ಸಾಂಪ್ರದಾಯಿಕ ಡೀಸೆಲ್ ಚಾಲಿತ ಜಲಾಂತರ್ಗಾಮಿ ನೌಕೆ ಖರೀದಿಗೆ ಆಸ್ಟ್ರೇಲಿಯಾ ಒಪ್ಪಂದ ಮಾಡಿಕೊಂಡಿತ್ತು. ಇದು ಸುಮಾರು ₹5 ಲಕ್ಷ ಕೋಟಿ ಮೊತ್ತದ ವ್ಯವಹಾರ.ಆದರೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಆಸ್ಟ್ರೇಲಿಯಾ ಮತ್ತು ಬ್ರಿಟನ್ ಜೊತೆಗೆ ಇತ್ತೀಚೆಗೆ ಹೊಸ ಮೈತ್ರಿಕೂಟ ಘೋಷಿಸಿದ್ದರು. ಅಣು ಇಂಧನ ಚಾಲಿತ ಎಂಟು ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾದ ನೌಕಾಪಡೆಗೆ ನೀಡುವುದಾಗಿ ಮಾತುಕತೆಯಾಗಿತ್ತು. ಹೀಗಾಗಿ ಫ್ರಾನ್ಸ್ ಜೊತೆಗಿನ ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದವನ್ನು ಆಸ್ಟ್ರೇಲಿಯಾ ಕೈಬಿಟ್ಟಿತ್ತು.

ಈ ವಿವಾದದ ನಡುವೆ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಕ್ವಾಡ್ ಸಭೆಯಲ್ಲಿ ಭಾಗಿಯಾಗಲು ಅಮೆರಿಕಕ್ಕೆ ಸೋಮವಾರ ಭೇಟಿ ನೀಡಿದ್ದಾರೆ.ವಿವಾದದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು, ಫ್ರಾನ್ಸ್ ಜೊತೆ ಉಂಟಾಗಿರುವ ಉದ್ವಿಗ್ನತೆಯನ್ನು ತಗ್ಗಿಸಲು ಯತ್ನಿಸಿದ್ದಾರೆ.ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡಿ, ಫ್ರಾನ್ಸ್‌ನ ಸಿಟ್ಟು ಶಮನ ಮಾಡುವ ಬಗ್ಗೆ ಚರ್ಚಿಸಲಿದ್ದಾರೆ.

ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಭೆ ಸೇರಲಿದ್ದು,ಈ ವಿಚಾರವಾಗಿ ಚರ್ಚಿಸಲಿದ್ದಾರೆ.

ಮಾತುಕತೆಗೆ ಬೈಡನ್ ಒಲವು: ಮುನಿಸಿಕೊಂಡಿರುವ ಮಿತ್ರನ ಜೊತೆ ಶೀಘ್ರದಲ್ಲಿ ಮಾತುಕತೆ ನಡೆಸಲು ಬೈಡನ್ ಒಲವು ತೋರಿದ್ದಾರೆ. ಬೈಡನ್ ಕೋರಿಕೆಯ ಮೇರೆಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜತೆಗೆ ಬರುವ ದಿನಗಳಲ್ಲಿ ದೂರವಾಣಿ ಸಂಭಾಷಣೆ ಏರ್ಪಾಡು ಮಾಡುವುದಾಗಿಫ್ರೆಂಚ್ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟಲ್ ಹೇಳಿದ್ದಾರೆ.

ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದ ರದ್ದುಗೊಂಡು, ಅದರಿಂದ ಉಂಟಾಗಿರುವ ಉದ್ವಿಗ್ನತೆ ಶಮನ ಮಾಡಲು ಆಸ್ಟ್ರೇಲಿಯಾದ ವ್ಯಾಪಾರ ಸಚಿವ ಡಾನ್ ಟೆಹನ್ ಮುಂದಾಗಿ ದ್ದಾರೆ. ಫ್ರಾನ್ಸ್‌ನ ವ್ಯಾಪಾರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಅಕ್ಟೋಬರ್‌ನಲ್ಲಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಭೆಗಾಗಿ ಪ್ಯಾರಿಸ್‌ಗೆ ತೆರಳಿದಾಗ ಮಾತುಕತೆ ನಡೆಸಲಿದ್ದಾರೆ.ವಿವಾದ ಉಂಟಾಗಿ ದ್ದರೂ, ಅದು ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲೆ ಪರಿಣಾಮ ಬೀರದು ಎಂದು ಅವರು ಹೇಳಿದ್ದಾರೆ.

ಉತ್ತರ ಕೊರಿಯಾ ಎಚ್ಚರಿಕೆ
ಆಸ್ಟ್ರೇಲಿಯಾಕ್ಕೆ ಅಣು ಇಂಧನ ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನೀಡುವ ಅಮೆರಿಕದ ನಿರ್ಧಾರವನ್ನು ಟೀಕಿಸಿರುವ ಉತ್ತರ ಕೊರಿಯಾ, ದೇಶದ ಭದ್ರತೆಗೆ ಅಪಾಯ ಎದುರಾಗುವ ಸನ್ನಿವೇಶ ಒದಗಿದರೆ, ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಅಮೆರಿಕ,ಬ್ರಿಟನ್ ಮತ್ತು ಆಸ್ಟ್ರೇಲಿಯಾ ನಡುವೆ ಏರ್ಪಟ್ಟ ಒಪ್ಪಂದವು ಏಷ್ಯಾ-ಪೆಸಿಫಿಕ್ ವಲಯದಲ್ಲಿ ಭದ್ರತಾ ವ್ಯವಸ್ಥೆಗೆ ಅಪಾಯಕಾರಿ ಆಗಲಿದೆ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಫ್ರಾನ್ಸ್ ಜತೆಗಿನ ನಮ್ಮ ಸಂಬಂಧದ ಬಗ್ಗೆ ತುಂಬಾ ಹೆಮ್ಮೆ ಇದೆ. ನಮ್ಮ ಹಾಗೂ ಫ್ರಾನ್ಸ್ ನಡುವಿನ ಪ್ರೀತಿ ಎಂದೂ ಕೊನೆಯಾಗದು.
-ಬೋರಿಸ್ ಜಾನ್ಸನ್,ಬ್ರಿಟನ್ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.