ಬ್ರಸೆಲ್ಸ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ, ತನ್ನ ವಾಯುಮಾರ್ಗವನ್ನು ಮುಚ್ಚಲಾಗುತ್ತದೆ ಎಂದು ಭಾನುವಾರ ಬೆಲ್ಜಿಯಂ ತಿಳಿಸಿದೆ. ಅನೇಕ ಯೂರೋಪಿಯನ್ ದೇಶಗಳು ಈಗಾಗಲೇ ಇದೇ ಮಾರ್ಗವನ್ನು ಅನುಸರಿಸಿವೆ.

'ರಷ್ಯಾದ ಎಲ್ಲ ವಿಮಾನಗಳಿಗೆ ತನ್ನ ವಾಯುಮಾರ್ಗವನ್ನು ಮುಚ್ಚಲು ಬೆಲ್ಜಿಯಂ ನಿರ್ಧರಿಸಿದೆ. ನಮ್ಮ ಯುರೋಪಿಯನ್ ಆಕಾಶ ತೆರೆದ ಆಕಾಶವಾಗಿದೆ. ಜನರನ್ನು ಸಂಪರ್ಕಿಸುವವರಿಗೆ ನಮ್ಮ ನೆಲ ತೆರೆದುಕೊಳ್ಳುತ್ತದೆ, ಹೊರತು ಕ್ರೂರವಾಗಿ ಆಕ್ರಮಣ ಮಾಡುವವರಿಗಲ್ಲ' ಎಂದು ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಟ್ವೀಟ್ ಮಾಡಿದ್ದಾರೆ.

ಯುರೋಪ್‌ನ ಚಿಕ್ಕ ದೇಶವಾದ ಆದರೆ, ಸರಕು ವಿಮಾನಗಳ ಕೇಂದ್ರವಾದ ನೆರೆಯ ಲುಕ್ಸಂಬರ್ಗ್ ಕೂಡ ಕಳೆದ ಭಾನುವಾರದಿಂದಲೇ ಜಾರಿಗೆ ಬರುವಂತೆ ಇದೇ ಕ್ರಮವನ್ನು ಕೈಗೊಂಡಿದೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಬಲ್ಗೇರಿಯ, ಪೋಲೆಂಡ್, ಜೆಕ್ ಗಣರಾಜ್ಯ, ಈಸ್ಟೊನಿಯ, ಲಾಟ್ವಿಯಾ, ಲಿಥುವೇನಿಯಾ, ಜೆರ್ಮನಿ, ಸ್ಲೋವೇನಿಯಾ, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ದೇಶಗಳು ಕೂಡ ರಷ್ಯಾ ವಿಮಾನಗಳಿಗೆ ತಮ್ಮ ವಾಯುಮಾರ್ಗವನ್ನು ಮುಚ್ಚಿವೆ.

ಇದಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾ ಕೂಡ ಇತರೆ ಯೂರೋಪಿಯನ್ ರಾಷ್ಟ್ರಗಳ ವಿಮಾನಗಳಿಗೆ ತನ್ನ ವಾಯುಮಾರ್ಗವನ್ನು ಮುಚ್ಚಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಫೆ.24 ರಂದು ಉಕ್ರೇನ್‌ನಲ್ಲಿ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದು, ರಷ್ಯಾದ ಸೇನಾಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸುತ್ತಿವೆ.

ರಷ್ಯಾದ ಈ ನಡೆಯನ್ನು ಅಮೆರಿಕ, ಯೂರೋಪ್ ಒಕ್ಕೂಟ ಸೇರಿದಂತೆ ವಿಶ್ವಸಮುದಾಯ ಖಂಡಿಸಿದ್ದು, ಅನೇಕ ನಿರ್ಬಂಧ ವಿಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.